ಮೈಸೂರು: ಕೊರೊನಾ 2ನೇ ಅಲೆ ಪ್ರಾಣಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದರಿಂದ, ನಗರದಲ್ಲಿ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪಾಲಕರು ಕೂಡ ಪ್ರಾಣಿಗಳ ಬಳಿ ಸುಳಿಯದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹಾದೇವಸ್ವಾಮಿ, ಪ್ರಾಣಿಗಳ ಬಳಿ ಕರ್ತವ್ಯ ನಿರ್ವಹಿಸುವ ಪಾಲಕರಿಗೆ ಪ್ರೋಟೋಕಾಲ್ ರೂಪಿಸಲಾಗಿದೆ. ಅದರಂತೆ ಕೆಲಸ ಮಾಡುತ್ತಿದ್ದಾರೆ. ಪಾಲಕರನ್ನು ಸ್ಕ್ರೀನಿಂಗ್ ಮಾಡಿ ಬಿಡಲಾಗುವುದು. ಪ್ರಾಣಿಗಳನ್ನು ಪಾಲಕರು ಕೈಗಳಿಂದ ಮುಟ್ಟುವಂತಿಲ್ಲ ಎಂದರು.
ಮೃಗಾಲಯಗಳಲ್ಲಿ ಕೊರೊನಾ ಸೋಂಕು ತಗುಲದಂತೆ ಸೌಖ್ಯವಾಗಿ ಇಡಲಾಗಿದೆ. ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಅಲ್ಲದೇ ಸಿಬ್ಬಂದಿಗೆ ವ್ಯಾಕ್ಸಿನೇಷನ್ ಮಾಡಿಸಲಾಗಿದೆ ಎಂದು ಹೇಳಿದರು.
ದರ್ಶನ್ ಮನವಿ ಮೇರೆಗೆ 40 ಲಕ್ಷ: ನಟ ದರ್ಶನ್ ಅವರು ಮೃಗಾಲಯ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರಿಂದ, ನಾಲ್ಕು ದಿನಗಳಲ್ಲಿ 40 ರಿಂದ 45 ಸಂಗ್ರಹವಾಗಿದೆ ಎಂದು ತಿಳಿಸಿದರು.
ಓದಿ: ಕರ್ನಾಟಕ ಅನ್ಲಾಕ್.. ಜೂನ್ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್