ETV Bharat / state

ಕೋವಿಡ್​​ ಆರ್ಭಟ: ಮತ್ತೆ ಸಂಕಷ್ಟಕ್ಕೀಡಾದ ಮೃಗಾಲಯಗಳು! - covid effects on zoo

ಕೋವಿಡ್​ ಹೊಡೆತಕ್ಕೆ ಪ್ರತಿ ಕ್ಷೇತ್ರವೂ ನಲುಗಿದೆ. ಕಳೆದ ಬಾರಿಯೇ ತೀವ್ರ ಸಮಸ್ಯೆ ಎದುರಿಸಿದ್ದ ಮೃಗಾಲಯಗಳು ಕೋವಿಡ್​ ಎರಡನೇ ಅಲೆಗೆ ಮತ್ತಷ್ಟು ಬೆಚ್ಚಿದೆ. ಮೃಗಾಲಯಗಳು ಮತ್ತೆ ಸಂಕಷ್ಟಕ್ಕೀಡಾಗಿದ್ದು, ದಾನಿಗಳ ನೆರವಿಗೆ ಮನವಿ ಮಾಡಲಾಗಿದೆ.

covid effects on mysore zoo
ಮತ್ತೆ ಸಂಕಷ್ಟಕ್ಕೀಡಾದ ಮೃಗಾಲಯಗಳು!
author img

By

Published : May 8, 2021, 5:17 PM IST

Updated : May 8, 2021, 5:45 PM IST

ಮೈಸೂರು: ಕೋವಿಡ್​​​ ಎರಡನೇ ಅಲೆ ಎಫೆಕ್ಟ್​​​​ನಿಂದ ಮೃಗಾಲಯಗಳು ಮತ್ತೆ ಸಂಕಷ್ಟಕ್ಕೀಡಾಗಿದ್ದು, ದಾನಿಗಳ ನೆರವಿಗೆ ಮನವಿ ಮಾಡಲಾಗಿದೆ.

ಕೋವಿಡ್​ ಕರ್ಫ್ಯೂ ಇದೀಗ ಲಾಕ್​ಡೌನ್​​​ನಿಂದ ಮೈಸೂರು ಮೃಗಾಲಯದ ಆದಾಯ ಗಣನೀಯವಾಗಿ ಕುಸಿತ ಕಂಡಿರುವುದರಿಂದ ಮೃಗಾಲಯದ ಪ್ರಾಣಿಗಳಿಗೆ ಆಹಾರ ಒದಗಿಸುವುದು ಸವಾಲಾಗಿದೆ. ಹಾಗಾಗಿ ಪ್ರಾಣಿಪ್ರಿಯರು, ದಾನಿಗಳು ಮೃಗಾಲಯಕ್ಕೆ ಸಹಾಯ ಮಾಡಿ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮನವಿ ಮಾಡಿದ್ದಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮನವಿ

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು, ಬನ್ನೇರುಘಟ್ಟ ಮೃಗಾಲಯದ ಆದಾಯದಿಂದ ಬಾಕಿ ಮೃಗಾಲಯಗಳ ನಿರ್ವಹಣೆ ಆಗುತ್ತಿತ್ತು. ಆದರೀಗ ಎಲ್ಲವೂ ಸಂಪೂರ್ಣವಾಗಿ ಮುಚ್ಚಿವೆ. ಕಳೆದ ಬಾರಿಯ ಕೊರೊನಾ ಎಫೆಕ್ಟ್​​​ನಿಂದ ಚೇತರಿಸಿಕೊಳ್ಳುವುದೇ ಕಷ್ಟವಾಗಿತ್ತು. ಇದೀಗ ಮತ್ತೆ ಕೋವಿಡ್​​ ಎರಡನೇ ಅಲೆಯಿಂದ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.

ಕೋವಿಡ್​​ ಹೊಡೆತದಿಂದ ಮೃಗಾಲಯಗಳ ನಿರ್ವಹಣೆ ಕಷ್ಟವಾಗಿದೆ. ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಜತೆಗೆ ಪ್ರಾಣಿಪ್ರಿಯರು, ಸಂಘ ಸಂಸ್ಥೆಗಳು, ಬ್ಯುಸಿನೆಸ್ ಮಾಡುವವರು, ಸಾರ್ವಜನಿಕರ ಆರ್ಥಿಕ ಸಹಾಯ ಬೇಕಿದೆ. ಪ್ರಾಣಿ - ಪಕ್ಷಿಗಳ ಆಹಾರಕ್ಕೆ, ನಿರ್ವಹಣೆಗೆ ಒಂದು ತಿಂಗಳಿಗೆ ಬರೋಬ್ಬರಿ ಎರಡು ಕೋಟಿ ಹಣಕ್ಕೂ ಹೆಚ್ಚು ಹೊಂದಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್​​ಗಳ ವ್ಯವಸ್ಥೆಯೇನು - ಅಗತ್ಯ ವೈದ್ಯಕೀಯ ಉಪಕರಣಗಳು ಇದೆಯಾ?

ಮೃಗಾಲಯ ಸಂಕಷ್ಟದಲ್ಲಿದ್ದು ಸಿಬ್ಬಂದಿಗೆ ವೇತನ, ವಿದ್ಯುತ್, ನೀರು ಹಾಗೂ ಇತರ ವ್ಯವಸ್ಥೆಗೆ ಬೇಕಾಗಿರುವ ಹಣಕ್ಕೆ ಯಾವುದೇ ಆದಾಯ ಇಲ್ಲ. ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬಹಳಷ್ಟು ಸಹಾಯ ಆಗಿತ್ತು. ಮೃಗಾಲಯಕ್ಕೆ ಮೂರುಕಾಲು ಕೋಟಿಯಷ್ಟು ಆರ್ಥಿಕ ಸಹಾಯ ಆಗಿತ್ತು. ಇದೀಗ ಜನರ ಸಹಕಾರ ಅಗತ್ಯ ಇಲ್ಲವಾದಲ್ಲಿ ಮೃಗಾಲಯಗಳ ನಿರ್ವಹಣೆಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.

ಮೃಗಾಲಯಗಳಿಗೆ ಸಹಕಾರ ನೀಡಬೇಕು. ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಬಾರಿಯಂತೆ ಜನರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

Last Updated : May 8, 2021, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.