ETV Bharat / state

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ: ಸಿದ್ದರಾಮಯ್ಯ ವಾಗ್ದಾಳಿ - ಪಿಎಸ್​ಐ ನೇಮಕಾತಿ ಅಕ್ರಮ

ಈಗ ನಡೆದಿರುವ ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೂ ಸೆಕೆಂಡ್‌ ಕೂಡ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ನೈತಿಕತೆ ಇದ್ದರೆ ಸಿಎಂ ಬೊಮ್ಮಾಯಿ ರಾಜೀನಾಮೆ ಪಡೆಯಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Apr 30, 2022, 5:35 PM IST

ಮೈಸೂರು: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆನೇ ಭ್ರಷ್ಟಾಚಾರ, ಮತ್ತು ಅಕ್ರಮಗಳು ಹೆಚ್ಚಾಗಿವೆ. ಸರ್ಕಾರದ ಗಮನಕ್ಕೆ ಬಾರದೆ ಭ್ರಷ್ಟಾಚಾರ ನಡೆಯಲು ಸಾಧ್ಯನಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಿ.ನರಸೀಪುರ ತಾಲೂಕಿನ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲೂ ಪಿಎಸ್‌ಐ ನೇಮಕಾತಿ ಆಯ್ತು. ಬೇರೆ-ಬೇರೆ ನೇಮಕಾತಿಗಳಾದವು. ಆಗೆಲ್ಲ ಇಂತಹ ಭ್ರಷ್ಟಾಚಾರ ನಡೆದಿತ್ತಾ?. ಈಗ ನಡೆದಿರುವ ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೂ ಸೆಕೆಂಡ್‌ ಕೂಡ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ನೈತಿಕತೆ ಇದ್ದರೆ ಸಿಎಂ ಬೊಮ್ಮಾಯಿ ಅವರು ರಾಜೀನಾಮೆ ಪಡೆಯಬೇಕು ಆಗ್ರಹಿಸಿದರು.

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನವಾದ ಕೂಡಲೇ ಪರೀಕ್ಷೆ ರದ್ದು ವಿಚಾರವಾಗಿ ಮಾತನಾಡಿ, ಬಂಧಿತ ದಿವ್ಯಾ ಸತ್ಯ ಹೇಳಲೇಬೇಕಲ್ವ?. ಬೇರೆ ಯಾರ್ಯಾರು ಇದ್ದಾರೆ. ಯಾರಿಂದ ಪೇಪರ್​ ಲೀಕ್ ಆಯ್ತು ಅಂತ ಗೊತ್ತಾಗಬೇಕಲ್ವ?. ಶಾಸಕ ಪ್ರಿಯಾಂಕ್​ ಖರ್ಗೆಗೆ ನೋಟಿಸ್ ನೀಡುವ ಅಗತ್ಯವಿರಲಿಲ್ಲ. ನಿಮ್ಮ ಬಳಿ ಏನ್ ದಾಖಲೆ‌ ಇದಾವೆ ಕೊಡಿ ಅಂತ ಕೇಳಬಹುದಿತ್ತು. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಬೇಕು. ಅದನ್ನ ಬಿಟ್ಟು ನೋಟಿಸ್​ ಯಾಕೆ ಕೊಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಮತ್ತೆ ಪರೀಕ್ಷೆ ಮಾಡಬೇಕು: ಪಿಎಸ್​ಐ ಅಕ್ರಮ ನೇಮಕಾತಿ ಪಾಲ್ಗೊಂಡವರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಪರೀಕ್ಷೆ ರದ್ದು ಮಾಡಿರುವುದು ಸರಿ. ಮತ್ತೆ ಮರು ಪರೀಕ್ಷೆ ಮಾಡಬೇಕೆಂದೂ ಸಿದ್ದರಾಮಯ್ಯ ಒತ್ತಾಯಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂಬ ಸಚಿವ ಆರ್.ಅಶೋಕ್‌ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ಬಿಜೆಪಿ ಪ್ರತಿಪಕ್ಷದಲ್ಲಿತ್ತು. ಆಗ ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಅಶೋಕ್​ ಬಾಯಿಗೆ ಕಡುಬ ಹಾಕಿಕೊಂಡಿದ್ನ ಎಂದು ಗರಂ ಆದರು.

ಒಂದು ಧರ್ಮ-ಜಾತಿ ಟಾರ್ಗೆಟ್ ಮಾಡಬೇಡಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಸ್ಲಿಂ ಮಟನ್ ಸ್ಟಾಲ್, ಕಸಾಯಿಖಾನೆ ಮುಚ್ಚಲು ನೋಟಿಸ್ ಕೊಟ್ಟು ಕೇವಲ ಮುಸ್ಲೀಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿರಾ?. ಬೇರೆ ಜಾತಿ, ಧರ್ಮದವರು ಮಟನ್ ಸ್ಟಾಲ್ ತೆರೆದಿಲ್ವ? ಹಿಂದೂಗಳು ಸೇರಿದಂತೆ ಬೇರೆ ಜಾತಿಯವರ ಅಂಗಡಿ ಮೇಲೆ ಯಾಕೆ ಕ್ರಮ ಕೈಗೊಳ್ಳಲ್ಲ?. ಕೇವಲ ಒಂದು ಧರ್ಮ, ಒಂದು ಜಾತಿಯವರನ್ನು ಟಾರ್ಗೆಟ್ ಮಾಡಬೇಡಿ. ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತಿದ್ದರೆ ಮಾಡಿ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕೆಂದು ಹೇಳಿದರು.

ರಾಜಕೀಯ ಲಾಭಕ್ಕಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಬೇಡಿ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೇ ತಪ್ಪು ಮಾಡಿದರೂ ಕ್ರಮ ತಗೊಳ್ಳಿ. ಒಂದು ವರ್ಗವನ್ನು ಟಾರ್ಗೆಟ್ ಮತ ಧ್ರುವೀಕರಣ ಆಗುತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಅದು ಅಸಾಧ್ಯ, ಅವರಿಗೆ ತಿರುಗುಬಾಣ ಆಗಿದೆ ಎಂದು ಟೀಕಿಸಿದರು.

ಸಿ.ಟಿ. ರವಿ ಹೇಳಿಕೆಗೆ ತಿರುಗೇಟು: ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಓಲೈಕೆ ಮಾಡುತ್ತಿದ್ದಾರೆ ಎಂಬ ಶಾಸಕ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿ, ಸೋನಿಯಾ ಗಾಂಧಿ ಹಿಂದಿ ರಾಷ್ಟ್ರೀಯ ಭಾಷೆ ಅಂದಿದ್ದಾರಾ?. ರಾಹುಲ್ ಗಾಂಧಿ ಆ ರೀತಿ ಮಾತನಾಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಯಾರಿಗೆ ಯಾರೂ ಗುಲಾಮರಲ್ಲ. ಅಮಿತ್ ಶಾ ಓಲೈಕೆ ಮಾಡುತ್ತಿರುವ ಕಾರಣಕ್ಕಾಗಿ ನಾನು ಸಿ.ಟಿ.ರವಿ ವಿರುದ್ಧ ಮಾತನಾಡಿದ್ದೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಶಾಸಕ ಸಾ‌.ರಾ. ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈಗ ಬಾದಾಯಿಯಿಂದ ಗೆದ್ದಿದ್ದೇನೆ. ಅಲ್ಲೇ ಸ್ಪರ್ಧೆ ಮಾಡುವಂತೆ ಸಾಕಷ್ಟು ಒತ್ತಾಯ ಬರುತ್ತಿದೆ. ಹಲವು ಕಡೆಯಿಂದಲೂ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಚುನಾವಣೆ ಬಂದಾಗ ಹೇಳ್ತಿನಿ ಎಂದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಬಲಪಡಿಸಿ; ಹೆಚ್ ​​ಕೆ ಪಾಟೀಲ್​ಗೆ ಸೋನಿಯಾ ಕಿವಿಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.