ಮೈಸೂರು : ವಕೀಲರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಇಂದು ಮತ್ತು ನಾಳೆ ಮೈಸೂರು ಕೋರ್ಟ್ ಕಲಾಪವನ್ನು ರದ್ದು ಪಡಿಸಲಾಗಿದೆ.
ಮೈಸೂರು ವಕೀಲರ ಸಂಘದ ಓರ್ವ ಸದಸ್ಯನಿಗೆ ಕೊರೊನಾ ವೈರಸ್ ತಗುಲಿದ ಹಿನ್ನೆಲೆ ಜುಲೈ 23 ಮತ್ತು 24ರಂದು ಮೈಸೂರಿನ ಹೊಸ ಮತ್ತು ಹಳೆ ಕೋರ್ಟ್‌ನಲ್ಲಿ ಯಾವುದೇ ಕಲಾಪಗಳು ನಡೆಯುವುದಿಲ್ಲ.
ಇಂದು ಮತ್ತು ನಾಳೆ ಕೋರ್ಟ್‌ಗೆ ಸ್ಯಾನಿಟೈಸರ್ ಸಿಂಪಡಿಸುವುದರಿಂದ ಕಲಾಪವನ್ನು ರದ್ದುಗೊಳಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ, ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಕೋರ್ಟ್ ಕಲಾಪ ರದ್ದಾಗಿದೆ ಎಂದು ಮೈಸೂರು ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಆನಂದ್ ಕುಮಾರ್ ತಿಳಿಸಿದ್ದಾರೆ.