ಮೈಸೂರು : ಜಿಲ್ಲೆಯಲ್ಲಿ 952 ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 33300ಕ್ಕೇರಿದೆ.
ಕೊರೊನಾದಿಂದ ಗುಣಮುಖರಾದ 20 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾಜ್೯ ಆದರೆ, ಕೊರೊನಾದಿಂದ ಓರ್ವರು ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಒಟ್ಟಾರೆ ಈವರೆಗೆ 33300 ಪ್ರಕರಣಗಳ ಪೈಕಿ, 26101 ಮಂದಿ ಗುಣಮುಖರಾಗಿದ್ದಾರೆ. 6477 ಸಕ್ರಿಯ ಪ್ರಕರಣಗಳಿವೆ. 722 ಮಂದಿಗೆ ಕೊರೊನಾಗೆ ಸಾವನ್ನಪ್ಪಿದ್ದಾರೆ.