ETV Bharat / state

ಮೈಸೂರಿನಲ್ಲಿ ಕೊರೊನಾ: ಸೋಂಕಿತನ ಜೊತೆಯಲ್ಲಿದ್ದ 13 ಮಂದಿ ಪತ್ತೆ

ಸೋಂಕಿತನ ಮಾಹಿತಿ ಬಹಿರಂಗ ಪಡಿಸಿದ ಕೆ.ಆರ್. ಆಸ್ಪತ್ರೆಯ ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈತ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದು, ಆತನ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸುವಂತೆ ಆಸ್ಪತ್ರೆ ಡೀನ್​ಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು.

Abhiram G. Sankar
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
author img

By

Published : Mar 23, 2020, 6:08 AM IST

ಮೈಸೂರು: ಕೊರೊನಾ ಸೋಂಕಿತನ ಜೊತೆಯಲ್ಲಿದ್ದ 13 ಮಂದಿಯನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಕೊರೊನಾ ಸೋಂಕಿತ ನೀಡಿದ ಮಾಹಿತಿ ಆಧಾರದ ಮೇಲೆ 13 ಜನರ ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 4 ಜನ ಸೋಂಕಿನ ಸನಿಹದಲ್ಲಿದ್ದು, ಉಳಿದ 9 ಮಂದಿ ಸಾಧಾರಣ ಮಟ್ಟದಲ್ಲಿದ್ದಾರೆ. ಇವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ ಎಂದರು.

ಇವರಲ್ಲಿ ಓರ್ವ ಚಿಕ್ಕಬಳ್ಳಾಪುರ, ಇಬ್ಬರು ಮಂಡ್ಯ ಹಾಗೂ 10 ಮಂದಿ ಮೈಸೂರಿನ ಪ್ರಯಾಣಿಕರಾಗಿದ್ದಾರೆ. ಇತರೆ ಪ್ರಯಾಣಿಕರ ಮಾಹಿತಿಯನ್ನ ಏರ್‌ ಇಂಡಿಯಾಗೆ ಕಳುಹಿಸಲಾಗಿದೆ. ಸದ್ಯ ಸೋಂಕಿತ ಹಾಗೂ ಆತನ ಜೊತೆ ಪ್ರಯಾಣಿಸಿದ್ದ 13 ಮಂದಿ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.

ಸೋಂಕಿತನ ಮಾಹಿತಿ ಬಹಿರಂಗ ಪಡಿಸಿದ ಕೆ.ಆರ್. ಆಸ್ಪತ್ರೆಯ ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈತ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ. ಆಸ್ಪತ್ರೆ ಡೀನ್ ಮೂಲಕ ಕ್ರೀಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದರು.

ಇಂದಿನಿಂದ ಜಿಲ್ಲೆಯಾದ್ಯಂತ ಲಾಕ್‌ಡೌನ್ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ‌ ಮಾತ್ರ ಅನುಮತಿ ನೀಡಲಾಗುವುದು. ಮಾರ್ಚ್​ 23ರಿಂದ ಮಾ31ರವರೆಗೆ ನಿರ್ಬಂಧವಿದೆ. ಕಾರ್ಖಾನೆಗಳಲ್ಲಿ ಶೇ 50ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು. ಐಟಿ- ಬಿಟಿ ಕಂಪನಿಯವರು ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳಬೇಕು. ಖಾಸಗಿ ಎಸಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂದರು.

ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಜಿಲ್ಲೆಯ ಗಡಿ ಭಾಗದ 5 ಚೆಕ್‌ ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯದವರ ಮೇಲು ಸಹ ನಿಗಾ ಇಡಲಾಗಿದೆ‌. ಪೂಜೆ- ಪುನಸ್ಕಾರದ ನೆಪದಲ್ಲಿ ಗುಂಪು ಸೇರುವಂತಿಲ್ಲ. ಹೋಮ್​ ಕ್ವಾರಂಟೇನ್‌ನಲ್ಲಿ ಇರುವವರು ಯಾವುದೇ ಕಾರಣಕ್ಕೂ‌ ಮನೆಯಿಂದ ಹೊರ ಬರಬಾರದು. ಒಂದು ವೇಳೆ‌ ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಜೊತೆಗೆ ಆಸ್ಪತ್ರೆಯಲ್ಲಿನ ಐಸೋಲೇಷನ್‌ ವಾರ್ಡ್​ಗೆ ಶಿಫ್ಟ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.