ಮೈಸೂರು: ಜಿಲ್ಲೆಯಲ್ಲಿ ಇಂದು 895 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಗುಣಮುಖರಾದ 449 ಮಂದಿ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ. ಇನ್ನು 18 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿ ಒಟ್ಟಾರೆ 15,775 ಪ್ರಕರಣಗಳ ಪೈಕಿ, 11,105 ಮಂದಿ ಸಂಪೂರ್ಣ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾಜ್೯ ಆಗಿದ್ದಾರೆ. 4,271 ಮಂದಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದು, 399 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾದಿಂದ ಆತಂಕಗೊಂಡಿರುವ ಜನರು, ಸ್ವಯಂ ಪ್ರೇರಿತರಾಗಿ ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.