ETV Bharat / state

ಕೊರೊನಾ ಸೋಂಕಿತರನ್ನು ಮಾನವೀಯತೆಯಿಂದ ನೋಡಿ: ಸುತ್ತೂರು ಶ್ರೀ

ಕೊರೊನಾ ಸೋಂಕು ರಾಜ್ಯ ಹಾಗೂ ದೇಶದೆಲ್ಲಡೆ ವ್ಯಾಪಕವಾಗಿ ಹರಡುತ್ತಿದೆ. ಇದು ಸಮುದಾಯದಲ್ಲೂ ಹರಡುತ್ತಿದ್ದು, ಎಲ್ಲರ ಭೀತಿಗೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಏನು ಮಾಡಬೇಕು ಮತ್ತು ಸೋಂಕಿತರನ್ನು ನಾವು ಯಾವ ರೀತಿ ನೋಡಬೇಕು ಎಂಬುದರ ಬಗ್ಗೆ ಸುತ್ತೂರು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಸುತ್ತೂರು ಶ್ರೀ
ಸುತ್ತೂರು ಶ್ರೀ
author img

By

Published : Jul 7, 2020, 6:06 PM IST

Updated : Jul 7, 2020, 7:53 PM IST

ಮೈಸೂರು: ಕೊರೊನಾಕ್ಕೆ ತುತ್ತಾದವರನ್ನು ಮಾನವೀಯತೆಯ ದೃಷ್ಟಿಯಿಂದ ನೋಡಬೇಕೆ ಹೊರತು ಅವರನ್ನು ಬೇರೆ ದೃಷ್ಟಿಯಿಂದ ನೋಡಬಾರದು ಎಂದು ಸುತ್ತೂರು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಕೊರೊನಾ ಸಂದೇಶವನ್ನು ನೀಡಿದ್ದು, ಆ ಸಂದೇಶದ ವಿಡಿಯೋ ಸಾರಾಂಶ ಇಲ್ಲಿದೆ.

ಕೊರೊನಾ ಸೋಂಕು ರಾಜ್ಯ ಹಾಗೂ ದೇಶದೆಲ್ಲಡೆ ವ್ಯಾಪಕವಾಗಿ ಹರಡುತ್ತಿದೆ, ಇದು ಸಮುದಾಯ ಮಟ್ಟಕ್ಕೂ ವಕ್ಕರಿಸುತ್ತಿರುವುದರಿಂದ ಎಲ್ಲರ ಭೀತಿಗೆ ಕಾರಣವಾಗಿದೆ. ಇದುವರೆಗೆ ಬಂದಿರುವ ವರದಿಗಳ ಪ್ರಕಾರ ಕಾಯಿಲೆ ಪಾಸಿಟಿವ್ ಇದ್ದವರೂ ಕೂಡ, ಸಾವಿನ ಸಂಖ್ಯೆ ಅಷ್ಟು ವೇಗದಲ್ಲಿ ಇಲ್ಲ. ಸಾವಿನ ಸಂಖ್ಯೆ ಕಡಿಮೆ ಇದೆ. ಕೊರೊನಾ ಸೋಂಕು ತಗುಲಿದ ಎಲ್ಲರಿಗೂ ಸಾವು ಸಂಭವಿಸುತ್ತದೆ ಎಂದು ಆತಂಕಕ್ಕೆ ಒಳಗಾಗಬೇಕಿಲ್ಲ. ಇದರಲ್ಲಿ ಮುನ್ನೆಚ್ಚರಿಕೆಯಿಂದ ಇರುವುದು ಬಹಳ ಮುಖ್ಯವಾಗಿದೆ. ಯಾರೇ ಸೋಂಕಿಗೆ ತುತ್ತಾದರೆ ಅವರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು ಅವರ ಬಗ್ಗೆ ಬೇರೆ ಬೇರೆ ಭಾವನೆಗಳನ್ನು ಉಂಟು ಮಾಡಿಕೊಳ್ಳುವುದಾಗಲಿ ಮಾಡಬಾರದು ಎಂದಿದ್ದಾರೆ.

ಕೊರೊನಾ ಸೋಂಕಿತರನ್ನು ಮಾನವೀಯತೆಯಿಂದ ನೋಡುವಂತೆ ಸುತ್ತೂರು ಶ್ರೀ ಸಲಹೆ

ಇನ್ನು ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿ ಬೇಗ ಗುಣ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡುವುದು ಅಗತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷವಾಗಿ ಇದಕ್ಕೆ ಎಲ್ಲಾ ರೀತಿಯ ಕ್ರಮ ವಹಿಸಿ ರೋಗ ಹರಡದಂತೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ವಿಭಿನ್ನ ಕಾರಣಗಳಿಂದ ಅದು ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಗಳು ಹೇಳಿದ ಹಾಗೆ ಇದರ ಜೊತೆಗೆ ಬದುಕುವಂತದ್ದು ಅನಿವಾರ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರವೂ ಕೂಡ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಂಡು ಇದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿದೆ.

ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಕೊರೊನಾ ಎಲ್ಲಿಂದ ಬರುತ್ತಿದೆ, ಹೇಗೆ, ಬರುತ್ತಿದೆ ಎಂದು ಆಲೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಅದನ್ನು ಹೇಗೆ ನಿಯಂತ್ರಿಸಬೇಕು ಎಂಬ ಕಡೆಗೆ ಗಮನ ಹರಿಸುವುದು ಅಗತ್ಯ. ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲಾ ಕಡೆ ಸ್ಯಾನಿಟೈಸರ್ ಮಾಡಿ ರೋಗಾಣು ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕು. ಚೆನ್ನಾಗಿ ಕೈ ಕಾಲುಗಳನ್ನು ಸೋಪ್ ಹಚ್ಚಿ ತೊಳೆದುಕೊಳ್ಳವುದು, ಯಾವಾಗಲೂ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡಿಕೊಳ್ಳುವುದು ಇದನ್ನು ಗಮಿಸಿ, ಆಚರಣೆ ಮಾಡುವ ಮೂಲಕವಾಗಿ ಪ್ರತಿಯೊಬ್ಬರೂ ಕೂಡ ಎಚ್ಚರಿಕೆಯಿಂದ ನಡೆದುಕೊಂಡಾಗ ಮಾತ್ರ ಈ ರೋಗ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಣಕ್ಕೆ ತರಲು ಸಾಧ್ಯ.

ಸರ್ಕಾರ ಮಾಡುತ್ತೆ ಎನ್ನುವ ಭಾವನೆಯನ್ನು ಯಾವುದೇ ಸಾಮಾನ್ಯ ಮನುಷ್ಯರು ಇಟ್ಟುಕೊಳ್ಳಬಾರದು, ಪ್ರತಿಯೊಬ್ಬ ನಾಗರಿಕನಿಗೂ ಸಂಬಂಧಪಟ್ಟಿದ್ದು ಎಂಬ ಮನವರಿಕೆ ಮಾಡಿಕೊಂಡು ವರ್ತಿಸಬೇಕು. ಎಲ್ಲಿ ತನಕ ಇದಕ್ಕೆ ಲಸಿಕೆ ಸೂಕ್ತವಾದ ಔಷಧಿ ಲಭ್ಯವಾಗುದಿಲ್ಲವೋ, ಅಲ್ಲಿ ತನಕ ಅನಿವಾರ್ಯವಾಗಿ ಇದನ್ನು ಎದುರಿಸುವ ಸಂದರ್ಭ ಒದಗಿ ಬಂದಿದೆ. ಈ ಅಂಶಗಳನ್ನು ಗಮನಿಸಿಕೊಂಡು ಸೋಂಕು ಹರಡದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಶ್ರೀಗಳು ತಮ್ಮ ಹೇಳಿದ್ದಾರೆ.

Last Updated : Jul 7, 2020, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.