ಮೈಸೂರು: ಮೂವರು ಕೆಎಸ್ಆರ್ಪಿ ಸಿಬ್ಬಂದಿ ಸೇರಿದಂತೆ 21 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಕ್ರಿಯ ಪ್ರಕರಣ 79ಕ್ಕೇರಿದೆ.
![corona increased in mysore](https://etvbharatimages.akamaized.net/etvbharat/prod-images/kn-mys-04-corona-vis-ka10003_23062020192939_2306f_1592920779_36.jpg)
ತಮಿಳುನಾಡಿನಿಂದ ಆಗಮಿಸಿದ 12, ರಾಜಸ್ಥಾನದಿಂದ ಆಗಮಿಸಿದ ಇಬ್ಬರಿಗೆ, ಪಿ. 9399 ರೋಗಿ ಸಂಪರ್ಕದಿಂದ ಮೂವರಿಗೆ, ಮೂವರು ಕೆಎಸ್ ಆರ್ ಪಿ ಸಿಬ್ಬಂದಿಗೆ, ಹಾಗೂ ಅಂತರ್ ಜಿಲ್ಲೆಯ ಓರ್ವನಿಗೆ ಕೊರೊನಾ ಸೋಂಕು ತಗುಲಿದೆ.
![corona increased in mysore](https://etvbharatimages.akamaized.net/etvbharat/prod-images/kn-mys-04-corona-vis-ka10003_23062020192939_2306f_1592920779_314.jpg)
ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 191 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ ಈವರೆಗೆ ಒಟ್ಟಾರೆ 113 ಮಂದಿ ಡಿಸ್ಚಾಜ್೯ ಆಗಿದ್ದು, 79 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 17009 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 16818 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.