ಮೈಸೂರು: ಸ್ವ್ಯಾಬ್ ಟೆಸ್ಟ್ ಮಾಡುವ ಸ್ಥಳಗಳಲ್ಲಿ ಪಾಸಿಟಿವ್ ಕಾಣಿಸಿಕೊಂಡವರಿಗೆ ವ್ಯಕ್ತಿಯ ಕೌನ್ಸಿಲಿಂಗ್ ಮಾಡಿ ಸ್ಥಳದಲ್ಲಿಯೇ ಮಾತ್ರೆ ಕೊಟ್ಟು ಕಳುಹಿಸುವ ಚಿಂತನೆ ನಡೆಯುತ್ತಿದೆ ಎಂದು ಇಲ್ಲಿನ ಡಿಹೆಚ್ಒ ಡಾ.ವೆಂಕಟೇಶ್ ಹೇಳಿದರು.
ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿ ಇರುವ ರೋಗಿಗಳನ್ನು ದಾಖಲಿಸಿಕೊಂಡು ರೋಗ ಲಕ್ಷಣ ಕಂಡು ಬಂದರೆ ಕೌನ್ಸೆಲಿಂಗ್ ಮಾಡಿ ಮಾತ್ರೆಗಳನ್ನು ನೀಡಲಾಗುತ್ತದೆ. ಜೊತೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಗೈಡ್ಲೈನ್ ಸಿಗಲಿದೆ ಎಂದರು.
ಬೆಂಗಳೂರಿನಂತೆ ಕಂಟೈನ್‌ಮೆಂಟ್ ಝೋನ್ಗಳನ್ನು ತೆಗೆದು ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದಿಲ್ಲ. ಕಂಟೈನ್‌ಮೆಂಟ್ ಝೋನ್ಗಳ ಮಾರ್ಗಸೂಚಿಗಳನ್ನು ನಾವು ಬದಲಾವಣೆ ಮಾಡುವುದಿಲ್ಲ. ಅವುಗಳು ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದರು.