ETV Bharat / state

ಮೈಸೂರಿನ ಜೆ ಕೆ ಟೈರ್ಸ್​ ಕಾರ್ಖಾನೆಯ 50 ಸಿಬ್ಬಂದಿಗೆ ಕೊರೊನಾ ಸೋಂಕು..!

ಮೈಸೂರಿನ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯ ನಂತರ, ಇದೀಗ ಜೆ ಕೆ. ಟೈರ್ಸ್​ ಕಂಪನಿಯಲ್ಲಿ ಕೊರೊನಾ ತನ್ನ ಆಟ ಶುರು ಮಾಡಿದೆ. ಕಂಪನಿಯ 50 ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ.

Corona for staff of Mysore JK Tires factory
ಮೈಸೂರು ಜೆಕೆ ಟೈರ್ಸ್​ ಕಾರ್ಖಾನೆಯ ಸಿಬ್ಬಂದಿಗೆ ಕೊರೊನಾ
author img

By

Published : Jul 19, 2020, 10:42 AM IST

ಮೈಸೂರು: ನಗರದ ಕೆಆರ್​ಎಸ್ ರಸ್ತೆಯಲ್ಲಿರುವ ಜೆ ಕೆ ಟೈರ್ಸ್​ ಕಾರ್ಖಾನೆಯ 50 ಮಂದಿ ನೌಕರರಿಗೆ ಕೊರೊನಾ ಸೋಂಕು ತಗುಲಿದ್ದು, ಕಾರ್ಖಾನೆಯನ್ನು ಸೀಲ್ ‌ಡೌನ್ ಮಾಡಲಾಗಿದೆ.

ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯ ನಂತರ, ಇದೀಗ ಜೆ ಕೆ ಟೈರ್ಸ್​ ಕಂಪನಿಯಲ್ಲಿ ಕೊರೊನಾ ತನ್ನ ಆರ್ಭಟ ಶುರು ಮಾಡಿದೆ.

ಜುಲೈ 10ರಿಂದಲೇ ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದರೂ ಕಂಪನಿಯನ್ನು ಬಂದ್ ಮಾಡಿರಲಿಲ್ಲ. ಸೋಂಕಿನಿಂದ ಬಳಲುತ್ತಿದ್ದವರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈ ವಿಷಯ ತಿಳಿದ ಜಿಲ್ಲಾಧಿಕಾರಿ ಕೂಡಲೇ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಲಿಂಗರಾಜು ಅವರು, ಕಾರ್ಖಾನೆಯನ್ನು ಸ್ಯಾನಿಟೈಸ್ ಮಾಡಿಸಿದ್ದಾರೆ. ಅಲ್ಲದೆ 6 ಸಾವಿರ ನೌಕರರಿಗೆ ಕೊರೊನಾ ರ‍್ಯಾಂಡಮ್ ಪರೀಕ್ಷೆ ಮಾಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.