ETV Bharat / state

ಸಾರ್ವಜನಿಕ ಸಾರಿಗೆ ಬಳಕೆಗೆ ಜನರ ಹಿಂದೇಟು: ಹಳೆ ಕಾರುಗಳಿಗೆ ಬಂತು ಹೊಸ ರೇಟು

ಕೊರೊನಾ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಾದರೂ ಜನತೆ ಹಳೆಯ ಕಾರು ಕೊಳ್ಳುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಸಾರ್ವಜನಿಕ ಸಂಚಾರಿ ವ್ಯವಸ್ಥೆಯಿಂದ ಕೊರೊನಾ ಭೀತಿ ಎದುರಾಗಿದ್ದು, ಸ್ವಂತ ವಾಹನ ಹೊಂದಲು ಜನತೆ ಮುಂದಾಗಿದ್ದಾರೆ.

Corona fear for use of public transport Demand for old car in Mysuru
ಸಾರ್ವಜನಿಕ ಸಾರಿಗೆ ಬಳಕೆಗೆ ಜನರ ಹಿಂದೇಟು: ಹಳೆ ಕಾರುಗಳಿಗೆ ಬಂತು ಹೊಸ ರೇಟು
author img

By

Published : Jul 6, 2020, 6:24 PM IST

ಮೈಸೂರು: ಲಾಕ್​​ಡೌನ್ ನಂತರ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದು , ಇದರಿಂದ ಹಳೆಯ ಕಾರ್​ಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.

ಮೈಸೂರಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ. ಅಲ್ಲದೆ ಸಾರ್ವಜನಿಕ ಸಾರಿಗೆಗಳಾದ ಬಸ್​, ಟ್ಯಾಕ್ಸಿ, ಆಟೋ ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಸಾಲ ಆದರೂ ಮಾಡಿ ಸ್ವಂತ ಹಳೆಯ ಕಾರ್​​​ಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಬಳಕೆಗೆ ಜನರ ಹಿಂದೇಟು: ಹಳೆ ಕಾರುಗಳಿಗೆ ಬಂತು ಹೊಸ ರೇಟು

ಈ ಕುರಿತು ಮಾತನಾಡಿರುವ ಹಳೆಯ ಕಾರುಗಳ ಮಾರಾಟ ಸಂಘದ ಅಧ್ಯಕ್ಷ ಇರ್ಫಾನ್ ಷರಿಫ್, ಲಾಕ್​​​ಡೌನ್ ಮುನ್ನ ಚಿಕ್ಕ ಗಾಡಿಗಳನ್ನು ಯಾರು ಕೇಳುತ್ತಿರಲಿಲ್ಲ, ಆದರೆ ಲಾಕ್​ಡೌನ್ ನಂತರ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಕೆ ಕಡಿಮೆಯಾಗಿದೆ. ಸಾಲ ಅಥವಾ ಚಿನ್ನಾವನ್ನಾದರೂ ಮಾರಿ 5 ಲಕ್ಷ ಒಳಗಿನ ಕಾರ್​​​ಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ ಎಂದಿದ್ದಾರೆ.

ಇವರಲ್ಲದೆ, ಮೈಸೂರು ಕಾರ್ ಅಸೋಸಿಯೇಷನ್​ ಪ್ರಧಾನ ಕಾರ್ಯದರ್ಶಿ ರೆಹಮತ್​ ಬೇಗ್ ಮಾತನಾಡಿ, ಲಾಕ್​​ಡೌನ್ ನಂತರ ಹಳೆಯ ಕಾರುಗಳು ಮಾರಾಟ ಆಗುತ್ತವಾ ಎಂಬ ಭಯ ಇತ್ತು. ಆದರೆ ಈಗ ಲಾಕ್​​ಡೌನ್ ನಂತರ ಜನರು ಸಣ್ಣ ಕಾರ್​​ಗಳನ್ನು ಕೊಳ್ಳಲು ಬರುತ್ತಿದ್ದಾರೆ, ಅಲ್ಲದೆ ಬೇಡಿಕೆ ಸಹ ಹೆಚ್ಚಿದೆ ಎಂದಿದ್ದಾರೆ.

ಒಟ್ಟಾರೆ ಕೊರೊನಾ ಎಫೆಕ್ಟ್​​ನಿಂದಾಗಿ ಹಳೆಯ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಹಳೆಯ ಕಾರು​ ಮಾರಾಟಗಾರರು ಸಂತಸಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.