ಮೈಸೂರು: ಕೊರೊನಾ ಹಿನ್ನೆಲೆ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವ ಎರಡೇ ದಿನಕ್ಕೆ ಮುಕ್ತಾಯವಾಗಿದೆ.
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಈ ವರ್ಷ ಎರಡೇ ದಿನದಲ್ಲಿ ಮುಕ್ತಾಯವಾಗಿದೆ. ಫೆ.9 ರಂದು ಸಾಮೂಹಿಕ ವಿವಾಹ ನಡೆದರೆ, ಫೆ.10ರಂದು ರಥೋತ್ಸವ ಹಾಗೂ ಸುತ್ತೂರಿನಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮನರಂಜನೆ ನೀಡಿದವು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಜೆ ಸಮಾಪ್ತಿಯಾಗಿದ್ದು, ಗದ್ದುಗೆಯಿಂದ ಶ್ರೀಮಠಕ್ಕೆ ಉತ್ಸವಮೂರ್ತಿಯನ್ನು ಕರೆತರಲಾಯಿತು. ಸುತ್ತೂರು ಶ್ರೀಗಳು, ವಾಟಾಳು ಶ್ರೀಗಳು, ಬೆಟ್ಟದಪುರದ ಶ್ರೀಗಳು, ಮಾದಹಳ್ಳಿ ಮಠದ ಶ್ರೀಗಳು, ಚಿಕತುಪುರು ಸ್ವಾಮೀಜಿ ಇನ್ನು ಮುಂತಾದವರು ಮಹೋತ್ಸವದಲ್ಲಿ ಭಾಗಿಯಾಗಿದ್ದರು.
ಓದಿ: ಆನ್ಲೈನ್ನಲ್ಲಿ ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಎಚ್ಚರ, ಕಾಲ್ಗರ್ಲ್ ಪಟ್ಟ ಕಟ್ಟಿಬಿಡ್ತಾರೆ..
ಪ್ರತಿ ವರ್ಷ ಆರು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿದ್ದ ಸುತ್ತೂರು ಜಾತ್ರೆ, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಎರಡೇ ದಿನಕ್ಕೆ ಜಾತ್ರಾ ಮಹೋತ್ಸವವನ್ನು ಸೀಮಿತಗೊಳಿಸಲಾಗಿತ್ತು. ಎರಡೇ ದಿನಕ್ಕೆ ಜಾತ್ರೆ ಮುಕ್ತಾಯವಾಗಿದ್ದರಿಂದ ಸಹಸ್ರಾರು ಭಕ್ತರು ಬೇಸರಗೊಂಡರು.