ETV Bharat / state

ವೃತ್ತಿಪರ ಕೋರ್ಸ್​​​ಗಳ ಪ್ರವೇಶಾತಿಗೆ ಕೋವಿಡ್​ ಅಡ್ಡಿ - ವೃತ್ತಿಪರ ಕೋರ್ಸ್​​ಗಳ ದಾಖಲಾತಿ ಇಳಿಕೆ

ಕೊರೊನಾ ನಮ್ಮ ಜೀವನದ ಮೇಲೆ ಹಲವು ಮಾರ್ಗಗಳಲ್ಲಿ ಪರಿಣಾಮ ಬೀರಿದ್ದು, ಸಾಮಾಜಿಕ ಅಂತರದಿಂದ ವರ್ಚ್ಯುವಲ್ ತರಗತಿಗಳವರೆಗೆ ನಮಗೇ ತಿಳಿಯದಂತೆ ಜೀವನವು ಸಾಕಷ್ಟು ಬದಲಾಗಿದೆ. ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿ ಮೇಲೆಯೂ ಈ ಮಹಾಮಾರಿ ಹೊಡೆತ ನೀಡಿದ್ದು, ದಾಖಲಾತಿ ಇಳಿಮುಖ ಕಂಡಿದೆ.

corona effect on professional course admission
ಮೈಸೂರು ವಿಶ್ವವಿದ್ಯಾಲಯ
author img

By

Published : Dec 28, 2020, 4:09 PM IST

ಮೈಸೂರು: ಕೋವಿಡ್ ಪರಿಣಾಮ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿ ಗಣನೀಯವಾಗಿ ಇಳಿಮುಖವಾಗಿದೆ. ಅನ್​ಲಾಕ್​ ಬಳಿಕ ಕೋರ್ಸ್​​ಗಳ ದಾಖಲಾತಿಗೆ ಅನುಮತಿ ನೀಡಿದ್ದರೂ ಸರ್ಕಾರ ಹಾಗೂ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳು ಖಾಲಿಯಾಗಿಯೇ ಉಳಿದಿವೆ.

ಇದನ್ನೂ ಓದಿ...ಮೈಸೂರು - ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ

ಇನ್​​​ಸ್ಟಿಟ್ಯೂಟ್​ ಆಫ್ ಇಂಜಿನಿಯರಿಂಗ್​​​‌ ಮುಖ್ಯಸ್ಥ ಎಂ.ಲಕ್ಷ್ಮಣ್ ಮಾತನಾಡಿ, ದೇಶದಲ್ಲಿ ಸುಮಾರು 4,000 ಇಂಜಿನಿಯರಿಂಗ್ ಕಾಲೇಜುಗಳಿವೆ. ವರ್ಷಕ್ಕೆ 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಾರೆ. ಜೊತೆಗೆ ಪಾಲಿಟೆಕ್ನಿಕ್, ಐಟಿಐ ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಸಂಸ್ಥೆಗಳು 10 ಲಕ್ಷ ಇವೆ. ಒಟ್ಟು 25 ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್​ನಿಂದ ಹೊರ ಬರುತ್ತಾರೆ ಎಂದು ಮಾಹಿತಿ ನೀಡಿದರು.

ಇನ್​​​ಸ್ಟಿಟ್ಯೂಟ್​ ಆಫ್ ಇಂಜಿನಿಯರಿಂಗ್​​​‌ ಮುಖ್ಯಸ್ಥ ಎಂ.ಲಕ್ಷ್ಮಣ್

ಈಗ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶೇ. 30 ಕೋರ್ಸ್​​ಗೆ ಪರೀಕ್ಷೆ ನಡೆಸಿದರೆ, ಭವಿಷ್ಯದಲ್ಲಿ ಅವರು ತೊಂದರೆ ಎದುರಿಸಲಿದ್ದಾರೆ. ಶೇ. 50ರಷ್ಟು ಪ್ರಾಯೋಗಿಕ ಹಾಗೂ ಶೇ. 50 ಕಲಿಕೆ ಇರಬೇಕು. ಆದರೆ, ಲಾಕ್​​​ಡೌನ್ ಅದೆಲ್ಲವನ್ನೂ ಕಿತ್ತುಕೊಂಡಿದೆ. ದೇಶದಲ್ಲಿ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

2019-20 ಹಾಗೂ 2020-21ನೇ ಸಾಲಿನಿಂದ ಹೊರ ಬರುವ ವಿದ್ಯಾರ್ಥಿಗಳು ಫೀಲ್ಡ್​​ನಲ್ಲೇ ಕಲಿಯಬೇಕು. ಸರಿಯಾದ ತರಬೇತಿ ದೊರೆಯದಿದ್ದರೆ ಉತ್ಪಾದನೆಗೆ ತೊಂದರೆಯಾಗುತ್ತದೆ. 8-10 ವರ್ಷಗಳ ಹಿಂದೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.