ETV Bharat / state

ಅಂಗಾಂಗ ದಾನಕ್ಕೂ ಕೊರೊನಾ ಕರಿನೆರಳು... ಮೃತ ದೇಹಗಳನ್ನು ಪಡೆಯಲು ಆಸ್ಪತ್ರೆಗಳು ಹಿಂದೇಟು - ಮೈಸೂರು ಸುದ್ದಿ

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದೇಹದಾನ ಪ್ರಕ್ರಿಯೆ ಸ್ಥಗಿತವಾಗಿದ್ದು, ಕೊರೊನಾ ಮುಗಿದ ನಂತರ ದೇಹದಾನ ಸ್ವೀಕರಿಸಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

Mysore KR Hospital
Mysore KR Hospital
author img

By

Published : Nov 7, 2020, 8:39 PM IST

ಮೈಸೂರು: ಅಂಗಾಂಗ ದೇಹದಾನಕ್ಕೂ ಕೊರೊನಾ ಕರಿ ನೆರಳು ಬೀರಿದ್ದು, ಮೃತಪಟ್ಟ ದೇಹಗಳನ್ನು ಪಡೆಯಲು ಆಸ್ಪತ್ರೆಗಳು ಕೂಡ ಹಿಂದೇಟು ಹಾಕುತ್ತಿವೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ‌ ಸಂಶೋಧನೆಗೆ ತೊಂದರೆಯಾಗುತ್ತಿದೆ.

ಮೈಸೂರಿನ ಕೆ.ಆರ್.ಆಸ್ಪತ್ರೆ

ಕೋವಿಡ್-19ನಿಂದ ಮೃತಪಟ್ಟ ದೇಹಗಳನ್ನು ವೈದ್ಯಕೀಯ ಕಾಲೇಜುಗಳು ಸ್ವೀಕರಿಸದೇ ಇರುವುದರಿಂದ ವೈದ್ಯಕೀಯ ಕ್ಷೇತ್ರದ ಸಂಶೋಧನೆಗೆ ತೀವ್ರ ಹಿನ್ನಡೆಯಾಗಿದ್ದು, ಅಂಗಾಂಗ ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನಲೆಯಲ್ಲಿ‌ ಅಂಗಾಂಗ ಕೊರತೆ ಕಾಡುತ್ತಿದೆ. ಅನಾರೋಗ್ಯ ಪೀಡಿತರ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದೇಹದಾನ ಪ್ರಕ್ರಿಯೆ ಸ್ಥಗಿತವಾಗಿದ್ದು, ಕೊರೊನಾ ಮುಗಿದ ನಂತರ ದೇಹದಾನ ಸ್ವೀಕರಿಸಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಆಸ್ಪತ್ರೆ ಜೊತೆ ಮಾಡಿಕೊಂಡಿದ್ದ ಒಪ್ಪಂದದಂತೆ ಕುಟುಂಬದವರು ದೇಹದಾನಕ್ಕೆ ಮುಂದಾದರೂ ಸ್ವೀಕರಿಸಲು ಸಾಧ್ಯವಿಲ್ಲ. ಅಂತಹವರಿಗೆ ಮನವೊಲಿಸಲಾಗುವುದು ಜೊತೆಗೆ ಅಂಗಾಂಗ ದಾನ ಪ್ರಕ್ರಿಯೆಯೂ ಸ್ಥಗಿತಗೊಳಿಸಲಾಗಿದೆ.

ದೇಹದಾನ ನೊಂದಣಿ ಕಾರ್ಯ ಮುಂದುವರೆಯುತ್ತದೆ ಆದರೆ, ಸ್ವೀಕಾರ ಇರುವುದಿಲ್ಲ ಎಂದಿದ್ದಾರೆ. ಇದರಿಂದ ದೇಹದಾನ ಮಾಡುವ ಮಂದಿಗೆ ನಿರಾಸೆ ಮೂಡಿದೆ. ಕೆ.ಆರ್.ಆಸ್ಪತ್ರೆಯ ಕಿಡ್ನಿ ತಜ್ಞ ಡಾ.ಎಂ.ಆರ್. ನಿರಂಜನ್ ಮಾತನಾಡಿ, ದೇಹದಾನಕ್ಕೆ ನೊಂದಣಿ ಮಾಡಿಸಿದ್ದರೂ ಸದ್ಯಕ್ಕೆ ಸ್ವೀಕಾರ ಮಾಡುವುದಿಲ್ಲ. ಅನಾಟಮಿ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ತೊಂದರೆ ಇಲ್ಲ. ಆನ್​ಲೈನ್ ಕ್ಲಾಸ್​ಗಳು ನಡೆಯುತ್ತಿರುವುದರಿಂದ ಮೃತದೇಹಗಳ ಕೊರತೆ ಕಾಡುತ್ತಿಲ್ಲ. ವೈದ್ಯಕೀಯ ಕ್ಷೇತ್ರದ ಸಂಶೋಧನೆಗಾಗಿ ಒಂದು ವರ್ಷಕ್ಕೆ ಬೇಕಾಗುವಷ್ಟು ಮೃತದೇಹಗಳು ಇವೆ ಎನ್ನುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.