ಮೈಸೂರು: ಕೊರೊನಾ ವೈರಸ್ ಹಿನ್ನೆಲೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪ್ರವಾಸ ಹೋಗದಂತೆ, ಸಭೆ, ಸಮಾರಂಭ, ವಿಚಾರ ಸಂಕಿರಣ ನಡೆಸದಂತೆ ಮೈಸೂರು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಸೂಚನೆ ನೀಡದೆ.
ವಿದೇಶಗಳಲ್ಲಿ ನಡೆಯಲಿರುವ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಭಾಗಿಯಾಗದಂತೆ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ವಿವಿಯಲ್ಲಿ ಅಧ್ಯಯನ ಮಾಡಿ ಈಗಾಗಲೇ ವಿದೇಶಕ್ಕೆ ಹೋಗಿರುವವರಿಗೆ ಹಾಗೂ ಚೀನಾ ದೇಶದ ವಿದ್ಯಾರ್ಥಿಗಳಿಗೆ ವಿವಿಗೆ ಬರದಂತೆ ಸಲಹೆ ನೀಡಲಾಗಿದೆ.