ಮೈಸೂರು: ಕೊರೊನಾ ಸೋಂಕಿನಿಂದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜುಬಿಲಂಟ್ ಕಾರ್ಖಾನೆ ನೌಕರರ ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ತೆರಳಿದ್ದು, ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ತುಂಬ ಹೃದಯದಿಂದ ಅಭಿನಂದನೆ ಸಲ್ಲಿಸಿದ್ದಾನೆ.
ಈತ ಸೋಮವಾರ ಕೊರೊನಾ ವೈರಸ್ನಿಂದ ಸಂಪೂರ್ಣ ಗುಣಮುಖನಾಗಿ ಮನೆಗೆ ತೆರಳಿದ್ದು, ಈ ಮೂಲಕ ಜುಬಿಲಂಟ್ ಕಾರ್ಖಾನೆಯ ಹಾಗೂ ಅವರ ಸಂಪರ್ಕದಿಂದ ಬಂದಿರುವ 30 ಮಂದಿ ಹಾಗೂ ತಬ್ಲಿಘಿ ಜಮಾತೆಯ 8 ಮಂದಿ ಸೇರಿ ಒಟ್ಟು 38 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.