ಮೈಸೂರು : ಕೊರೊನಾ ಹಿನ್ನೆಲೆ ಮದುವೆಯಲ್ಲಿ ವಧು-ವರನಿಗೆ ಮಾಸ್ಕ್ ಹಾರ ಹಾಕಿ ಪೋಷಕರು ಶುಭ ಕೋರಿದ್ದಾರೆ.
ಪಿ.ರಾಘವನ್ ಹಾಗೂ ಸ್ನೇಹ ವಿವಾಹದಲ್ಲಿ ಉಡುಗೊರೆ ಕೊಡುವ ಬದಲು, ಮಾಸ್ಕ್ ಹಾರ ಹಾಕಿ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಯಿತು.
ವಿವಾಹದಲ್ಲಿ ಸಾಮಾಜಿಕ ಅಂತರ ಕಾಯುವಂತೆ, ಪ್ರತಿಯೊಬ್ಬರಿಗೂ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಕೊರೊನಾ ವಿರುದ್ಧ ನೂತನ ವಧು-ವರರು ಹೋರಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.