ಮೈಸೂರು: ನಮ್ಮ ದೇಶದಲ್ಲಿ ಈಗ ಇವಿಎಂ ಮಷಿನ್ ಎಂವಿಎಂ ಮಷಿನ್ ಆಗಿದೆ. ಅಂದರೆ ಮೋದಿ ವೋಂಟಿಂಗ್ ಮೆಷಿನ್ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ನಂತರ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇವಿಎಂ ಯಂತ್ರಗಳು ಮ್ಯಾನ್ ಮೇಡ್ ಆಗಿದ್ದು, ಅದರಲ್ಲಿ ಲೋಪದೋಷಗಳು ಇವೆ. ಸಾಫ್ಟ್‌ವೇರ್ ಹ್ಯಾಕ್ ಆಗುವ ಅವಕಾಶ ಇದೆ. ಈ ವಿಚಾರ ಸುಪ್ರೀಂ ಕೋರ್ಟ್ವರೆಗೂ ಹೋಗಿದ್ದು, ಸುಪ್ರೀಂ ಕೋರ್ಟ್ ಕ್ಷೇತ್ರದ 5 ಇವಿಎಂ ಮತ ಯಂತ್ರಗಳನ್ನು ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ? ಏಕೆಂದರೆ ಒಂದು ಕ್ಷೇತ್ರದಲ್ಲಿ 300ರಿಂದ 450 ಇವಿಎಂ ಮಷಿನ್ಗಳು ಇರುತ್ತವೆ. ಅವುಗಳ ಪರಿಶೀಲನೆ ನಡೆಯುವುದಿಲ್ಲ. 15 - 20 ವರ್ಷ ಆಡಳಿತ ನಡೆಸಿದ ವಿವಿಧ ರಾಜ್ಯಗಳಲ್ಲಿ ನೋಡಿದರೆ ಮತ್ತೆ ಅಲ್ಲಿ ಅವರೇ ಗೆಲ್ಲುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ ಎಂದರು.
ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಹಾಗೂ ಆರ್.ಎಸ್.ಎಸ್ನವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಇವಿಎಂ ಬ್ಯಾನ್ ಮಾಡಿ ಬ್ಯಾಲೆಟ್ ಪೇಪರ್ ಚುನಾವಣೆ ನಡೆಸಿ ಎಂದು ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಮೆರಿಕದಲ್ಲಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಯುತ್ತಿದ್ದು, ನಮ್ಮಲ್ಲಿ ಏಕೆ ಸಾಧ್ಯವಿಲ್ಲ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲಿ ಇವಿಎಂ ಮಷಿನ್ ಈಗ ಎಂವಿಎಂ ಮಷಿನ್ ಆಗಿದೆ. ಅಂದರೆ ಮೋದಿ ವೋಂಟಿಂಗ್ ಮೆಷಿನ್ ಆಗಿದೆ. ಅದನ್ನೇ ರಾಹುಲ್ ಗಾಂಧಿಯವರು ಬಿಹಾರದಲ್ಲಿ ಹೇಳಿದರು. ಬಿಜೆಪಿ ಎಲ್ಲಾ ಇಂಡಿಪೆಂಡೆಂಟ್ ಏಜೆನ್ಸಿಗಳನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇನ್ನು ಇತ್ತೀಚೆಗೆ ಬೇಸ್ ಇಲ್ಲದ ಕಡೆ ಬಿಜೆಪಿ ಉಪಚುನಾವಣೆಯನ್ನು ಗೆಲ್ಲುತ್ತಿರುವುದನ್ನು ನೋಡಿದರೆ ನೂರಕ್ಕೆ ನೂರರಷ್ಟು ಸಂಶಯ ಬರುತ್ತದೆ. ಇನ್ನು ಮುಂದೆ ಕಾಂಗ್ರೆಸ್ ಚುನಾವಣಾಯನ್ನು ಬಹಿಷ್ಕಾರ ಮಾಡುವ ಪರಿಸ್ಥಿತಿ ಬಂದಿದೆ ಎಂದು ಲಕ್ಷ್ಮಣ್ ಇವಿಎಂ ಮಷಿನ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇತರ ಪಕ್ಷಗಳ ಜೊತೆ ಚರ್ಚೆ ಮಾಡಿ ಇವಿಎಂ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ಧಗೊಳಿಸಲಿದೆ ಎಂದರು.