ETV Bharat / state

ಹುಣಸೂರಿನಲ್ಲಿ ಕಾಂಗ್ರೆಸ್​​ನಿಂದ ಹಣದ ಹೊಳೆ​​, ವಿಶ್ವನಾಥ್​ ಒಳ್ಳೆಯ ವ್ಯಕ್ತಿ: ರಾಮುಲು

ಉಪಚುನಾವಣೆಯಲ್ಲಿ ಗೆಲ್ಲಲೆಂದು ಕಾಂಗ್ರೆಸ್​​ ಪಕ್ಷ ಹುಣಸೂರಿನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಇಂತಹ ಕೆಲಸ ಬಿಜೆಪಿ ಎಂದಿಗೂ ಮಾಡಿಲ್ಲ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್​​ ವಿರುದ್ಧ ಆರೋಪವೆಸಗಿದ್ದಾರೆ.

ಸಚಿವ ಶ್ರೀರಾಮುಲು ಹೇಳಿಕೆ
ಸಚಿವ ಶ್ರೀರಾಮುಲು ಹೇಳಿಕೆ
author img

By

Published : Nov 26, 2019, 12:58 PM IST

ಮೈಸೂರು: ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷದವರು ಹಣ ಹಂಚುವ ಮೂಲಕ ನೀಚ ರಾಜಕಾರಣ ಮಾಡುತ್ತಿದ್ದಾರೆ. ‌ಆದರೆ ನಾವ್ಯಾರಿಗೂ ಹಣ ಕೊಡುತ್ತಿಲ್ಲ ಎಂದು ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಖಾಸಗಿ ಹೋಟೆಲ್ ನಲ್ಲಿ ಶಕ್ತಿ ಕೇಂದ್ರದ ಅಭ್ಯರ್ಥಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಇಡೀ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಸಂಪೂರ್ಣ ವಿಶ್ವಾಸವಿರುವುದರಿಂದಲೇ 15 ಕ್ಕೆ 15 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದು. ಯಾರು ಅರ್ಹರು, ಯಾರು ಅನರ್ಹರು ಎಂಬುದನ್ನು ಜನ ತಿರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಸಚಿವ ಶ್ರೀರಾಮುಲು ಹೇಳಿಕೆ

ವಿಶ್ವನಾಥ್ ಒಳ್ಳೆಯ ರಾಜಕಾರಣಿ, ಅವರನ್ನು ಗೆಲ್ಲಿಸಲೇಬೇಕು. ಹುಣಸೂರಿಗೆ ಹೋದ ಕಡೆ ಎಲ್ಲಾ ಕಾಂಗ್ರೆಸ್ ಅವರು ಹಣದಿಂದ ಜನರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಹೊರತು ರಾಜಕಾರಣದಿಂದ ಅಲ್ಲ. ನಾವು ಅವರಂತೆ ಯಾರಿಗೂ ಹಣ ಕೊಟ್ಟಿಲ್ಲ, ಸ್ವಯಂ ಪ್ರೇರಿತರಾಗಿ ನಿನ್ನೆಯ ಸಭೆಗೆ ಎಲ್ಲಾ ಕಾರ್ಯಕರ್ತರು ಬಂದಿದ್ದಾರೆ. ಮಾಜಿ ಸಚಿವ ಜಿಟಿ ದೇವೇಗೌಡ ಅವರ ಬೆಂಬಲವನ್ನು 100 ಕ್ಕೆ ಶೇ100 ಕೇಳುತ್ತೇನೆ ಎಂದು ರಾಮುಲು ಈ ವೇಳೆ ನುಡಿದರು.

Intro:ಮೈಸೂರು: ಹುಣಸೂರಿನ ಎಲ್ಲಾ ಕಡೆ ಕಾಂಗ್ರೆಸ್ ಅವರು ಹಣದಿಂದ ರಾಜಕಾರಣ ಮಾಡುತ್ತಿದ್ದಾರೆ ‌ನಾವ್ಯಾರಿಗೂ ಹಣ ಕೊಡುತ್ತಿಲ್ಲ ಎಂದು ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Body:ಇಂದು ಖಾಸಗಿ ಹೋಟೆಲ್ ನಲ್ಲಿ ಶಕ್ತಿ ಕೇಂದ್ರದ ಅಭ್ಯರ್ಥಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು ಸಿಎಂ ಇಡಿ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಫುಲ್ ಕಾನ್ಫಿಡೆನ್ಸ್ ನಲ್ಲಿ ಹೇಳುತ್ತಿದ್ದಾರೆ ೧೫ ಕ್ಕೆ ೧೫ ಸ್ಥಾನವನ್ನು ಗೆಲ್ಲುತ್ತೇವೆ ಎಂದು. ಯಾರು ಅರ್ಹರು, ಯಾರು ಅನರ್ಹರು ಎಂಬುದನ್ನು ಜನ ತಿರ್ಮಾನ ಮಾಡುತ್ತಾರೆ.
ವಿಶ್ವನಾಥ್ ಒಳ್ಳೆಯ ರಾಜಕಾರಣಿ ಅವರನ್ನು ಗೆಲ್ಲಿಸಬೇಕಾಗಿದೆ ಎಂದ ಶ್ರೀರಾಮುಲು, ಹುಣಸೂರಿಗೆ ಹೋದ ಕಡೆ ಎಲ್ಲಾ ಕಾಂಗ್ರೆಸ್ ಅವರ ಪ್ರಭಾವ ಬೀರಿ ಹಣದಿಂದ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದಾರೆ.‌ ನಾವ್ಯಾರಿಗೂ ಹಣ ಕೊಟ್ಟಿಲ್ಲ, ಸ್ವಯಂ ಪ್ರೇರಿತರಾಗಿ ನೆನ್ನೆಯ ಸಭೆಗೆ ಎಲ್ಲರೂ ಬಂದಿದ್ದಾರೆ ನೆನ್ನೆಯ ಸಭೆ ನೋಡಿ ಕಾಂಗ್ರೆಸ್ ನೋಡಿ ನಮ್ಮ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದ ಸಚಿವ ಶ್ರೀರಾಮುಲು ಮಾಜಿ ಸಚಿವ ಜಿಟಿ ದೇವೇಗೌಡ ಅವರ ಬೆಂಬಲವನ್ನು ೧೦೦ ಕ್ಕೆ ೧೦೦% ಕೇಳುತ್ತೇನೆ ಎಂದರು.
ಚುನಾವಣೆಯ ನಂತರ ಉಪ ಮುಖ್ಯಮಂತ್ರಿ ಆಗುತ್ತೀರಾ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವರು. ಡಿಕೆಶಿ ಜನಾರ್ದನ ರೆಡ್ಡಿ ಭೇಟಿಯ ಬಗ್ಗೆ ಗೊತ್ತಿಲ್ಲ ಎಂದ ಅವರು
ಇನ್ನೂ ಮಧ್ಯಂತರ ಚುನಾವಣೆ ಬರುವುದಿಲ್ಲ ಕಾಂಗ್ರೆಸ್ ಅವರು ೩ ವರೆ ವರ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೊಳ್ಳಬೇಕಾಗುತ್ತದೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.