ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ನಂಬರ್ 36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ವಿರುದ್ಧ ಬರೋಬ್ಬರಿ 1,997 ಮತಗಳ ಭಾರಿ ಅಂತರದಿಂದ ಜಯ ಗಳಿಸಿದ್ದಾರೆ.
![congress-candidate-won-in-mysore-corporation-by-election](https://etvbharatimages.akamaized.net/etvbharat/prod-images/kn-mys-02-mcc-byelection-vis-ka10003_06092021111007_0609f_1630906807_511.jpg)
ರಜಿನಿ ಅಣ್ಣಯ್ಯ 4,113 ಮತ ಗಳಿಸಿದರೆ, ಜೆಡಿಎಸ್ ಅಭ್ಯರ್ಥಿ ಲೀಲಾವತಿ ಮಹೇಶ್‌ಗೆ 2,116 ಮತ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ರಮೇಶ್ ಕೇವಲ 601 ಮತಗಳು ಲಭಿಸಿವೆ. 66 ನೋಟಾ ಮತದಾನವಾಗಿದೆ.
![congress-candidate-won-in-mysore-corporation-by-election](https://etvbharatimages.akamaized.net/etvbharat/prod-images/kn-mys-02-mcc-byelection-vis-ka10003_06092021111007_0609f_1630906807_935.jpg)
ಜೆಡಿಎಸ್ ಅಭ್ಯರ್ಥಿ, ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ನಡೆದ ಚುನಾವಣೆ ಇದಾಗಿದ್ದು, ಜೆಡಿಎಸ್ ಹೀನಾಯ ಸೋಲುಂಡಿದೆ. ಜಿ.ಟಿ.ದೇವೇಗೌಡ ಟ್ರಂಪ್ ಕಾರ್ಡ್ ಕಾಂಗ್ರೆಸ್ಗೆ ವರದಾನವಾದರೆ, ಸಾರಾ ಮಹೇಶ್ ಸೇರಿದಂತೆ ದಳಪತಿಗಳಿಗೆ ಮುಖಭಂಗವಾಗಿದೆ. ಈ ಮೂಲಕ ಕಾಂಗ್ರೆಸ್ ಮೇಯರ್ ಚುನಾವಣೆಯ ಸೇಡು ತೀರಿಸಿಕೊಂಡಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ MES ಗೆ ತೀವ್ರ ಮುಖಭಂಗ.. ಬಿಜೆಪಿಗೆ ತೆಕ್ಕೆಗೆ ಕುಂದಾನಗರಿ