ಮೈಸೂರು: ಮದುವೆ ಆಗುತ್ತೇನೆ ಎಂದು ನಂಬಿಸಿ 5 ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿರುವ ವ್ಯಕ್ತಿ ಜೊತೆ ತನ್ನ ಮದುವೆ ಮಾಡಿಸುವಂತೆ ಮಹಿಳೆಯೋರ್ವರು ದೂರು ನೀಡಿರುವ ಘಟನೆ ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆಯನ್ನು(ದೂರು ಕೊಟ್ಟವರು) ಶಿವನಾಗು ಎಂಬುವ ವ್ಯಕ್ತಿ ಕಳೆದ 5 ವರ್ಷದಿಂದ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಮಹಿಳೆ ಗರ್ಭವತಿಯಾದಾಗ ಗರ್ಭಪಾತ ಮಾಡಿಸಿ ಈಗ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದಾನೆ. ಈ ಹಿನ್ನೆಲೆ ವ್ಯಕ್ತಿ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿಗಳಲ್ಲಿರುವ ಮರಗಳ ಪುನಶ್ಚೇತನಕ್ಕೆ ವಿಶೇಷ ವ್ಯವಸ್ಥೆ: ಸಚಿವ ಸಿ.ಸಿ. ಪಾಟೀಲ್ ಹೇಳಿಕೆ
ಶಿವನಾಗು ಜೊತೆ ತನ್ನ ಮದುವೆ ಮಾಡಿಸಿ ಎಂದು ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೊತೆಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.