ETV Bharat / state

ಮೈಸೂರು ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಅಸಮಾಧಾನ : ಸಾಮೂಹಿಕ ರಾಜೀನಾಮೆಗೆ ಮುಂದಾದ ತನ್ವೀರ್ ಸೇಠ್ ಬೆಂಬಲಿಗರು

author img

By

Published : Mar 19, 2021, 7:23 PM IST

ಅಹಿಂದ ಹೆಸರಿನಲ್ಲಿ ದಲಿತ ನಾಯಕರನ್ನು ಕಡೆಗಣನೆ ಮಾಡಿದರು. ಪರಮೇಶ್ವರ್‌ ಅವರಿಗೆ ಸಿಎಂ ಪಟ್ಟ ತಪ್ಪಿಸಿದ್ರು, ಶ್ರೀನಿವಾಸ್ ಪ್ರಸಾದ್ ಪಕ್ಷದಿಂದ ಹೊರ ಹೋಗುವಂತೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆಗೂ ಅನ್ಯಾಯ ಮಾಡಿದರು ಎಂದು‌ ಆರೋಪಿಸಿದರು.

Cold war between Mysuru Congress leaders
ಸಾಮೂಹಿಕ ರಾಜೀನಾಮೆಗೆ ಮುಂದಾದ ತನ್ವೀರ್ ಸೇಠ್ ಬೆಂಬಲಿಗರು

ಮೈಸೂರು : ತಮ್ಮ ಮೂವರು ಬೆಂಬಲಿಗರನ್ನು ಕಾಂಗ್ರೆಸ್​ ಪಕ್ಷದಿಂದ ಅಮಾನತು ಮಾಡಿರುವ ಹಿನ್ನಲೆ ಮಾಜಿ ಸಿಎಂ‌ ಸಿದ್ದರಾಮಯ್ಯ ವಿರುದ್ಧ ಶಾಸಕ ತನ್ವೀರ್ ಸೇಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಆದೇಶದಿಂದ ಅಜೀಜ್ ಸೇಠ್ ಬ್ಲಾಕ್​ನ ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಿಡಿಮಿಡಿಗೊಂಡಿದ್ದಾರೆ. ಬ್ಲಾಕ್​ನ ಎಲ್ಲಾ 9 ವಾರ್ಡ್ ಮತ್ತು 141 ಬೂತ್ ಅಧ್ಯಕ್ಷರು ಸಾಮೂಹಿಕ ರಾಜೀನಾಮೆ ನೀಡಲು‌ ನಿರ್ಧರಿಸಿದ್ದಾರೆ.

ತನ್ವೀರ್ ಸೇಠ್ ಬೆಂಬಲಿಗರಾದ ಸೈಯದ್ ಇಕ್ಬಾಲ್ ರಹಮಾನ್ ಖಾನ್, ನಿಸಾರ್ ಅಹ್ಮದ್, ರಸೂಲ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮನಾತುಗೊಂಡ ಕಾಂಗ್ರೆಸ್ ಮುಖಂಡ ರಾಜು ಪ್ರತಿಕ್ರಿಯೆ..

ಓದಿ : ಸಿದ್ದರಾಮಯ್ಯ ವಿರುದ್ಧ ಘೋಷಣೆ: ಮೂವರು ನಾಯಕರಿಗೆ ಕಾಂಗ್ರೆಸ್​ನಿಂದ ಗೇಟ್ ಪಾಸ್

ಈ ಕುರಿತು ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ ರಾಜು ಮಾತನಾಡಿ, ಸಿದ್ದರಾಮಯ್ಯ ದಲಿತರ ಉದ್ಧಾರಕ‌ ಅಲ್ಲ. ಅವರು ದಲಿತ ನಾಯಕರನ್ನು ದಮನಗೊಳಿಸಿದ್ದಾರೆ. ಸಿದ್ದರಾಮಯ್ಯ ಅವರು ಜಿ. ಪರಮೇಶ್ವರ್‌ ಅವರಿಗೆ ಮೋಸ ಮಾಡಿದರು.

ಅಹಿಂದ ಹೆಸರಿನಲ್ಲಿ ದಲಿತ ನಾಯಕರನ್ನು ಕಡೆಗಣನೆ ಮಾಡಿದರು. ಪರಮೇಶ್ವರ್‌ ಅವರಿಗೆ ಸಿಎಂ ಪಟ್ಟ ತಪ್ಪಿಸಿದ್ರು, ಶ್ರೀನಿವಾಸ್ ಪ್ರಸಾದ್ ಪಕ್ಷದಿಂದ ಹೊರ ಹೋಗುವಂತೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆಗೂ ಅನ್ಯಾಯ ಮಾಡಿದರು ಎಂದು‌ ಆರೋಪಿಸಿದರು.

ಪರಮಾಪ್ತ ಹೆಚ್.ಸಿ ಮಹದೇವಪ್ಪ ಅವರನ್ನು ಡಿಸಿಎಂ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ಅಮಾನತುಗೊಂಡರೂ ನಾನು ಕಾಂಗ್ರೆಸ್ ಬಿಟ್ಟು ಎಲ್ಲಿ ಹೋಗುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.