ETV Bharat / state

ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ. ಯಾವ್ಯಾವ ಜಾತಿಯ ಜನ ಎಷ್ಟಿದ್ದಾರೆ ಎಂಬ ಅಂಕಿ-ಅಂಶಗಳು ಸರ್ಕಾರಕ್ಕೆ ಯೋಜನೆ ಸಿದ್ಧಪಡಿಸಲು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM Siddaramaiah talks about Caste census
ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Oct 7, 2023, 3:09 PM IST

ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ನವೆಂಬರ್​ನಲ್ಲಿ ಜಾತಿ ಗಣತಿ ವರದಿ ಸರ್ಕಾರದ ಕೈ ಸೇರಬಹುದು. ಇದರಿಂದ ಯಾವ್ಯಾವ ಸಮುದಾಯ ಎಷ್ಟಿದೆ ಎಂಬ ಅಂಕಿ-ಅಂಶಗಳು ಗೊತ್ತಾಗಲಿದ್ದು, ಯೋಜನೆಗಳನ್ನು ಸಿದ್ಧಪಡಿಸಲು ಈ ಅಂಕಿ-ಅಂಶಗಳು ಸರ್ಕಾರಕ್ಕೆ ಬೇಕು. ಹಾಗಾಗಿ ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ. ಸಮೀಕ್ಷೆಯು ಸಮಾಜವನ್ನು ವಿಭಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಮೈಸೂರಿನ ಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜನೆ ಮಾಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ವೇಳೆ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಜಾತಿ ಗಣತಿ ಸಮಿತಿಯ ಅಧ್ಯಕ್ಷರು ಬದಲಾದ ಕಾರಣ ನವೆಂಬರ್​ನಲ್ಲಿ ಜಾತಿ ಗಣತಿ ವರದಿ ನಮ್ಮ ಕೈ ಸೇರಲಿದೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

"ಜಾತಿ ಗಣತಿಗೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಅವರು ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ ಅವರ ನಡೆಗೂ ನುಡಿಗೂ ಬಹಳ ವ್ಯತ್ಯಾಸವಿದೆ. ಅವರು ಜಾತಿ ಗಣತಿಯನ್ನು ವಿರೋಧಿಸುತ್ತಾರೆ. ಜಾತಿ ಗಣತಿಯಿಂದ ಸಮಾಜ ವಿಭಜನೆ ಆಗುತ್ತದೆ ಎಂಬುದು ಸುಳ್ಳು" ಎಂದು ತಿರುಗೇಟು ನೀಡಿದರು.

ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, "ಈ ಹಿಂದೆಯೂ ಮಹಿಷ ದಸರಾ ಆಚರಣೆ ಮಾಡಿದ್ದಾರೆ. ಮಹಿಷ ದಸರಾ ಆಚರಿಸುವುದನ್ನು ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ. ಸರ್ಕಾರದಿಂದ ಮಹಿಷ ದಸರಾ ಆಚರಣೆಗೆ ಯಾವುದೇ ಅನುಮತಿ ನೀಡಿಲ್ಲ" ಎಂದು ಸ್ಪಷ್ಟನೆ ನೀಡಿದರು. ಬಳಿಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದರು.

ಕೇಂದ್ರದಿಂದ ಬರ ಪರಿಹಾರ ಕೇಳಿದ್ದೇವೆ: "ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಿರುವ ಬರ ಅಧ್ಯಯನ ತಂಡ ಎಲ್ಲಾ ಹಳ್ಳಿಗೂ ಭೇಟಿ ನೀಡಿ, ಸಮಸ್ಯೆ ಆಲಿಸಿ ಎಂದು ಕೇಳಿಕೊಂಡಿದ್ದೇವೆ. ನಾವು ಆ ಕಡೆ ಬನ್ನಿ, ಈ ಕಡೆ ಬನ್ನಿ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ. ಹೊಲದಲ್ಲಿ ಹಸಿರು ಇದ್ದರೆ ಫಲ ಎಂಬುದು ಅರ್ಥವಲ್ಲ. ಬೆಳೆ ಬರಬೇಕು, ಹೀಗಾಗಿ ಹಸಿರನ್ನು ನೋಡಿ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಈ ಬಾರಿ ರಾಜ್ಯಕ್ಕೆ 4500 ಕೋಟಿ ರೂಪಾಯಿ ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡ ಇಲ್ಲಿಯ ವರದಿಯನ್ನು ಕೇಂದ್ರಕ್ಕೆ ನೀಡುತ್ತಾರೆ. ವರದಿಯ ಆಧಾರದ ಮೇಲೆ ಕೇಂದ್ರ ಪರಿಹಾರದ ಮೊತ್ತವನ್ನು ತೀರ್ಮಾನ ಮಾಡುತ್ತಾರೆ. ಬರಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧವಿಲ್ಲ. ಬರ ಇದ್ದರೂ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರೆಯುತ್ತವೆ" ಎಂದು ತಿಳಿಸಿದರು.

ಲಿಕ್ಕರ್ ಶಾಪ್ ತೆರೆಯಲು ಅವಕಾಶ ಇಲ್ಲ: "ಸಾರ್ವಜನಿಕರ ಅಭಿಪ್ರಾಯ ಹಾಗೂ ನನ್ನ ಪ್ರಕಾರ ಹೊಸ ಲಿಕ್ಕರ್ ಶಾಪ್ ತೆರೆಯಲು ಅನುಮತಿ ನೀಡುವ ಪ್ರಸ್ತಾವನೆ ಇಲ್ಲ. ಲಿಕ್ಕರ್ ಶಾಪ್ ತೆರೆಯಲು ಅವಕಾಶವಿಲ್ಲ. ಡಿ. ಕೆ.ಶಿವಕುಮಾರ್ ಹೊಸದಾಗಿ ಲಿಕ್ಕರ್ ಶಾಪ್ ತೆರೆಯುತ್ತೇವೆ ಎಂದು ಹೇಳಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೇ. ಆದರೆ ನಮಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯ" ಎಂದು ಸಿಎಂ ಹೊಸ ಲಿಕ್ಕರ್ ಶಾಪ್ ತೆರೆಯಲು ಲೈಸೆನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: 100 ಕರ್ನಾಟಕ ಸಾರಿಗೆ ಹಾಗೂ 40 ನಾನ್​ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್​​​​ಗಳಿಗೆ ಸಿಎಂ, ಡಿಸಿಎಂ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.