ETV Bharat / state

2 ಕ್ಷೇತ್ರದ ಉಪಚುನಾವಣೆ ಗೆದ್ದಾಗಿದೆ: ಸಿಎಂ ಬಿಎಸ್​ವೈ ವಿಶ್ವಾಸ - ಮಂಡಕಳ್ಳಿ‌ ವಿಮಾನ ನಿಲ್ದಾಣ

ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿರುವುದರಿಂದ, ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ. ಜನರ ಆಶೀರ್ವಾದ ಅಭ್ಯರ್ಥಿಗಳ ಮೇಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

CM BS Yediyurappa
ಸಿಎಂ ಬಿಎಸ್​ವೈ
author img

By

Published : Oct 16, 2020, 7:40 PM IST

ಮೈಸೂರು: ಶಿರಾ ಹಾಗೂ ಆರ್.ಆರ್‌. ನಗರ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಾಗಿದೆ. ಮತಗಳ ಅಂತರವಷ್ಟೇ ಬಾಕಿ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌.

ಮಂಡಕಳ್ಳಿ‌ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿರುವುದರಿಂದ, ಉಪಚುನಾವಣೆಯಲ್ಲಿ ಗೆಲುತ್ತೇವೆ. ಜನರ ಆಶೀರ್ವಾದ ಅಭ್ಯರ್ಥಿಗಳ ಮೇಲಿದೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಎನ್​ಡಿಆರ್​ಎಫ್ ನಿಧಿಯಿಂದ 5 ಲಕ್ಷ ರೂ.ಪರಿಹಾರ ನೀಡಲಾಗುವುದು. ಈಗಾಗಲೇ ತಾತ್ಕಾಲಿಕವಾಗಿ 10 ಸಾವಿರ ನೀಡಲಾಗಿದೆ ಎಂದು ಹೇಳಿದರು.

ನೆರೆ ಹಾವಳಿಯಿಂದ ಒಂದು ಸಾವಿರ ಮನೆಗಳು ಕುಸಿತಗೊಂಡಿವೆ. ಬೆಳೆ ಹಾನಿಯ ಬಗ್ಗೆ ವಾರದೊಳಗೆ ಮಾಹಿತಿ ನೀಡುವಂತೆ 14 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ನಾಳೆ ಬೆಳಗ್ಗೆ ದಸರಾ ಉದ್ಘಾಟನೆ ಮಾಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರಳ ನಡೆಸಲಾಗುತ್ತಿದೆ. ‌ನೆರೆ ಹಾವಳಿ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.