ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳು ಸಹ ತಮ್ಮ ಮತ ಚಲಾಯಿಸಿ, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಖ್ಯಾತ ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮೈಸೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಾಳವಿಕಾ ಅವಿನಾಶ್ ಮತದಾನ: ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮೈಸೂರಿನ ಕೃಷ್ಣ ಮೂರ್ತಿಪುರಂನಲ್ಲಿರುವ ಗುಬ್ಬಚ್ಚಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಅವರು ಮತದಾನ ಮಾಡಿ ಹೊರಬಂದಾಗ ಅವರನ್ನು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಇತರ ಮುಖಂಡರು ಹಾಜರಿದ್ದರು.
ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್: ಮೈಸೂರಿನ ಕೆಲವು ಕಡೆ ಗೊಂದಲ ಏರ್ಪಟ್ಟಿತ್ತು. ಮತದಾರರ ಗುರುತು ಚೀಟಿ ಇದ್ದರೂ ಕೂಡ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ನಗರದ ಗಾಂಧಿ ನಗರ, ವಿಜಯನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತ ಚಲಾಯಿಸಲು ಬಂದ ವ್ಯಕ್ತಿಗಳು ಮತ ಚಲಾಯಿಸದೇ ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್: ಡಾಲಿ ಧನಂಜಯ್, ರಿಷಬ್ ಶೆಟ್ಟಿ ಮತದಾನ
ಕೆ.ಆರ್ ನಗರದ ಮತಕೇಂದ್ರದಲ್ಲಿ ಗೊಂದಲ: ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ, ಮತದಾನ ನಡೆಯುವ ಸ್ಥಳದಲ್ಲಿ ಕೂರಲು ಏಜೆಂಟ್ಗಳನ್ನು ಬಿಡುತ್ತಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಮತಕೇಂದ್ರದ ಒಳಗೆ ಚುನಾವಣಾ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ಪ್ರಶ್ನೆ ಮಾಡಿದ ಘಟನೆಯೂ ಸಹ ನಡೆದಿದೆ.
ಇದನ್ನೂ ಓದಿ: ಚುನಾವಣೆ 2023: ಮತ ಚಲಾಯಿಸಿದ ಕನ್ನಡ ತಾರೆಯರು