ಮೈಸೂರು: ಸರಗೂರು ತಾಲೂಕಿನ ಹೊರವಲಯದಲ್ಲಿರುವ ಜಮೀನೊಂದರಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಚಿರತೆ ಬಿದ್ದಿದೆ.
ಕಳೆದ ಆರು ತಿಂಗಳಿಂದ ಸರಗೂರು ತಾಲೂಕಿನ ಅಕ್ಕಪಕ್ಕ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು. ಗ್ರಾಮದ ಜನರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಹುಲಿ ಸೆರೆಗಾಗಿ ನಾಗೇಶ್ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದರು. ಆದರೆ, ಈ ಬೋನಿಗೆ ಹುಲಿ ಬದಲು ಚಿರತೆ ಬಂದು ಬಿದ್ದಿದೆ.
ಬೋನಿಗೆ ಬಿದ್ದಿರುವ 4 ವರ್ಷದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದಾರೆ.