ETV Bharat / state

Olympicsಗೆ ದಿನಗಣನೆ : ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ‘ಚಿಯರ್ ಫಾರ್ ಇಂಡಿಯಾ’ ಸೆಲ್ಫಿ ಅಭಿಯಾನ - Indian athletes

ರೈಲ್ವೆ ಪ್ರಯಾಣಿಕರು ಇಲ್ಲಿ ಸೆಲ್ಫಿತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುವುದರಿಂದ ಒಲಿಂಪಿಕ್ಸ್​​ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್​​​ವಾಲ್ ತಿಳಿಸಿದ್ದಾರೆ..

'Cheer for India'
‘ಚಿಯರ್ ಫಾರ್ ಇಂಡಿಯಾ
author img

By

Published : Jul 3, 2021, 5:09 PM IST

ಮೈಸೂರು : ಜುಲೈ 23ರಂದು ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್​​ಗೆ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಮನೋಬಲ ತುಂಬುವ ದೃಷ್ಟಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ‘ಚಿಯರ್ ಫಾರ್ ಇಂಡಿಯಾ’ ಎಂಬ ಸೆಲ್ಫಿ ಪಾಯಿಂಟ್‌ನ ತೆರೆಯಲಾಗಿದೆ.

ಟೋಕಿಯೋ ಒಲಂಪಿಕ್ಸ್​ಗೆ ಸಜ್ಜಾಗುತ್ತಿರುವ ಭಾರತೀಯ ಕ್ರೀಡಾಪಡುಗಳಿಗೆ ಹುರಿದುಂಬಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವತಿಯಿಂದ ಜಿಲ್ಲೆಯನ್ನು ಸೇರಿಕೊಂಡಂತೆ ಹಾಸನ, ಅರಸೀಕೆರೆ, ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣಗಳಲ್ಲಿ ‘ಚಿಯರ್ ಫಾರ್ ಇಂಡಿಯಾ’ ಸೆಲ್ಫಿ ಪಾಯಿಂಟ್ ತೆರೆಯಲಾಗಿದೆ.

ರೈಲ್ವೆ ಪ್ರಯಾಣಿಕರು ಇಲ್ಲಿ ಸೆಲ್ಫಿತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುವುದರಿಂದ ಒಲಿಂಪಿಕ್ಸ್​​ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್​​​ವಾಲ್ ತಿಳಿಸಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರೆ ಬಹಳ ಹೆಮ್ಮೆಯ ವಿಚಾರ. ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ, ಬೆಳ್ಳಿಯ ಪದಕ ಹೀಗೆ ಹಲವಾರು ಪದಕಗಳ‌ನ್ನು ತಂದುಕೊಟ್ಟಂತ ಕ್ರೀಡಾಪಟುಗಳನ್ನು ಕಾಣಬಹುದಾಗಿದೆ. ಪದಕವನ್ನು ಗೆಲ್ಲಲು ಕ್ರೀಡಾಪಟುಗಳಿಗೆ ಮನೋಸಾಮರ್ಥ್ಯವನ್ನು ಹೆಚ್ಚಿಸಲು ಈ ‘ಚಿಯರ್ ಫಾರ್ ಇಂಡಿಯಾ’ ಎಂಬ ಅಭಿಯಾನವನ್ನು ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕೈಗೊಳ್ಳಲಾಗಿದೆ.

ಓದಿ: ಮೈಸೂರಲ್ಲಿ BE ವಿದ್ಯಾರ್ಥಿಗಳಿಬ್ಬರು ನೀರುಪಾಲು.. ಸ್ನೇಹಿತನ ಬರ್ತ್​ಡೇಯಂದೇ ದುರಂತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.