ETV Bharat / state

ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂ ವಿವಾದ: ರಾಜಮನೆತನದ ಪರ ಸುಪ್ರೀಂ ತೀರ್ಪು - ರಾಜಮನೆತನದ ಪರ ಸುಪ್ರೀಂ ತೀರ್ಪು

ಮೈಸೂರಿನ ಕುರುಬರಹಳ್ಳಿ, ಆಲನಹಳ್ಳಿ, ಚೌಡಹಳ್ಳಿಯ 1,536 ಎಕರೆ ಪ್ರದೇಶದ ಭೂ ವಿವಾದ ವಿಚಾರವಾಗಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ಜಮೀನು ರಾಜಮನೆತನದವರಿಗೆ ಸೇರಿದೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

Pramodhadevi
ರಾಜಮಾತೆ ಪ್ರಮೋದಾದೇವಿ
author img

By

Published : Nov 25, 2021, 3:16 PM IST

ಮೈಸೂರು: ಚಾಮುಂಡಿ ಬೆಟ್ಟದ ಪಾದದ ಸಾವಿರಾರು ಎಕರೆ ಭೂಮಿ ಮಾಲೀಕತ್ವದ ಆಸ್ತಿ ವಿಚಾರವಾಗಿ ರಾಜಮನೆತನ‌ ಹಾಗೂ ರಾಜ್ಯ ಸರ್ಕಾರದ ನಡುವೆ ಅನೇಕ ವರ್ಷಗಳಿಂದ ನಡೆಯುತ್ತಿದ್ದ ವ್ಯಾಜ್ಯಕ್ಕೆ ತೆರೆ ಬಿದ್ದಿದೆ. ಇದೀಗ, ರಾಜಮನೆತನದ ಪರವಾಗಿ ಸುಪ್ರೀಂಕೋರ್ಟ್​ ತೀರ್ಪು‌ ಬಂದಿದೆ.

ಮೈಸೂರಿನ ಕುರುಬರಹಳ್ಳಿ, ಆಲನಹಳ್ಳಿ, ಚೌಡಹಳ್ಳಿಯ 1536 ಎಕರೆ ಪ್ರದೇಶದ ಭೂ ವಿವಾದ ಸಂಬಂಧ ಸರ್ಕಾರಕ್ಕೆ ದೊಡ್ಡಮಟ್ಟದ ಹಿನ್ನಡೆಯಾಗಿದೆ. ಈ ಜಮೀನು ಮೈಸೂರು ಅರಸರಿಗೆ ಸೇರಿದ್ದು ಎಂದು ಸುಪ್ರೀಂಕೋರ್ಟಿನ ವಿಭಾಗೀಯ ಪೀಠ ಹೇಳಿದೆ. ಕಳೆದ ಜುಲೈನಲ್ಲಿ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠವೂ ವಜಾಗೊಳಿಸಿದೆ.

ಈ ಮೂಲಕ ಜಮೀನು ಮೂಲವಾಗಿ ರಾಜಮನೆತನದವರಿಗೆ ಸೇರಿದೆ ಎಂದು ಮತ್ತೊಮ್ಮೆ ಕೋರ್ಟ್‌ ಹೇಳಿತು. ಈ ಹಿಂದೆ, ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. 1974ರ ಹಿಂದೆ ಯಾರು ರಾಜಮನೆತನದಿಂದ ಭೂಮಿ ಪಡೆದಿದ್ದರೋ ಅವರಿಗೂ ಭೂ ಮಾಲೀಕತ್ವ ದೊರೆಯಲಿದ್ದು, ರಾಜ್ಯ ಸರ್ಕಾರ ರಾಜಮನೆತನದವರಿಗೆ ಖಾತೆ ಕಂದಾಯ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದೆ.

ಡಿಸೆಂಬರ್‌ 07 ರಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ:

ಖಾತೆ ಕಂದಾಯ ಮಾಡಿ ಕೊಡದ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರಾಜಮನೆತನದರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಡಿ.07 ರಂದು ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸದಿದ್ದರೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಂಕಷ್ಟ ಎದುರಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.