ETV Bharat / state

ಪ್ರಸಾದ್ ಯೋಜನೆ ಜಾರಿ ಮುನ್ನ ಜನಾಭಿಪ್ರಾಯ ಅಗತ್ಯ: ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಆಗ್ರಹ - ಚಾಮುಂಡಿ ಬೆಟ್ಟ ಉಳಿಸಿ ಸಮಿತಿ

ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಪ್ರಸಾದ್ ಯೋಜನೆ - ನೈಸರ್ಗಿಕ ಸೌಂದರ್ಯ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಅನುಷ್ಠಾನಕ್ಕೆ ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಆಗ್ರಹ - ಕೇಂದ್ರ ಸರ್ಕಾರ 49 ಕೋಟಿ ಹಣ ಬಿಡುಗಡೆ - ಚಾಮುಂಡಿ ಬೆಟ್ಟದ ಪರಿಸರಕ್ಕೆ ತೊಡಕಾಗುವ ರೀತಿ ನೀಲನಕ್ಷೆ ರಚನೆ ಆರೋಪ.

Chamundi Hill Temple
ಚಾಮುಂಡಿ ಬೆಟ್ಟದ ದೇವಸ್ಥಾನ
author img

By

Published : Jan 12, 2023, 7:07 PM IST

ಪರಿಸರ ತಜ್ಞ ರವಿಕುಮಾರ್

ಮೈಸೂರು:ಪ್ರಸಾದ್ ಯೋಜನೆಯ ಕುರಿತಾಗಿ ಜನಾಭಿಪ್ರಾಯ ಸಂಗ್ರಹಿಸಿ ಚಾಮುಂಡಿ ಬೆಟ್ಟದ ಸಹಜ ಸೌಂದರ್ಯಕ್ಕೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಆಗದ ರೀತಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ನೈಸರ್ಗಿಕವಾಗಿರುವ ಚಾಮುಂಡಿ ಬೆಟ್ಟದ ಸೌಂದರ್ಯ ಹಾಳಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಆಗ್ರಹಿಸಿದೆ.

ಇಂದು ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾರಂಪರಿಕ ತಜ್ಞ ರಂಗರಾಜನ್ ಹಾಗೂ ಪರಿಸರ ತಜ್ಞ ರವಿಕುಮಾರ್ ಚಾಮುಂಡಿ ಬೆಟ್ಟದಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಪ್ರಸಾದ್ ಯೋಜನೆಯನ್ನು ಜಾರಿಗೆ ಮಾಡುವುದು ಸರಿಯಲ್ಲ ಎಂದು ತಮ್ಮ ಸಂದರ್ಶನದಲ್ಲಿ ವಿವರಿಸಿದ್ದು, ಈ ಯೋಜನೆ ಜಾರಿಯಿಂದ ಆಗುವ ಅಪಾಯದ ಬಗ್ಗೆ ವಿವರಿಸಿದ್ದಾರೆ.

ಪಾರಂಪರಿಕ ತಜ್ಞ ರಂಗರಾಜನ್

ಚಾಮುಂಡಿ ಬೆಟ್ಟ ಉಳಿಸಿ:ಚಾಮುಂಡಿ ಬೆಟ್ಟದ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 49.21 ಕೋಟಿ ಹಣ ಬಿಡುಗಡೆ ಮಾಡಿದೆ.ಇದರಿಂದ ಚಾಮುಂಡಿ ಬೆಟ್ಟದ ಮೇಲೆ ಹಲವಾರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿದೆ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆದಿರುವ ಸಂದರ್ಭದಲ್ಲಿ, ಪರಿಸರವಾದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ತಮ್ಮ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಚಾಮುಂಡಿ ಬೆಟ್ಟದಲ್ಲಿ "ಪ್ರಸಾದ್" ಯೋಜನೆ ಜಾರಿ ಮಾಡುವ ಮುನ್ನ ಜನಾಭಿಪ್ರಾಯ ಸಂಗ್ರಹಿಸಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು "ಚಾಮುಂಡಿ ಬೆಟ್ಟ ಉಳಿಸಿ" ಸಮಿತಿ ಆಗ್ರಹಿಸಿದೆ. ನೈಸರ್ಗಿಕವಾಗಿರುವ ಬೆಟ್ಟ ಹಾಗೂ ಪವಿತ್ರ ಧಾರ್ಮಿಕ ಕ್ಷೆತ್ರ ಆಗಿರುವ ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆ ಜಾರಿಯಿಂದ ಅನಾನುಕೂಲಗಳ ಬಗ್ಗೆ ಪಾರಂಪರಿಕ ತಜ್ಞ ರಂಗರಾಜನ್ ಹೇಳಿದ್ದು ಹೀಗೆ.

ಜನಾಭಿಪ್ರಾಯ ಪಡೆದು ಯೋಜನೆ ಜಾರಿ ಅವಶ್ಯ:ಚಾಮುಂಡಿ ಬೆಟ್ಟ ನೈಸರ್ಗಿಕವಾಗಿರುವ ಬೆಟ್ಟ. ಇಲ್ಲಿ ಪ್ರಸಾದ್ ಯೋಜನೆ ಜಾರಿಯಿಂದಾಗುವ ತೊಂದರೆಗಳು, ಬೆಟ್ಟದ ಅಸ್ತಿತ್ವಕ್ಕೆ ಮಾರಕವಾಗಲೂಬಹುದು .ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಹಲವಾರು ಯೋಜನೆಗಳನ್ನು ತಂದು ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರವೂ ಈಗ ವ್ಯಾಪಾರಿ ಕೇಂದ್ರವೂ ಆಗಿದೆ. ಇದರಿಂದ ಮತ್ತೆ ಪ್ರಸಾದ್ ಯೋಜನೆಯನ್ನು ಜಾರಿಗೆ ತಂದರೆ, ಇನ್ನೂ ಹಲವು ಅಭಿವೃದ್ಧಿ ಕೆಲಸಗಳು ನಡೆದು ನೈಸರ್ಗಿಕವಾಗಿರುವ ಚಾಮುಂಡಿ ಬೆಟ್ಟ ಮತ್ತೆ ಕಾಂಕ್ರೀಟ್ ಕಾಡು ಪ್ರದೇಶವಾಗುತ್ತದೆ. ಈ ಬಗ್ಗೆ ನಾವು ಯೋಚನೆ ಮಾಡಬೇಕಾಗುತ್ತದೆ. ಆದ್ದರಿಂದ ಜನಾಭಿಪ್ರಾಯ ಪಡೆದು ಯೋಜನೆ ಜಾರಿಗೊಳಿಸಿದರೆ ಒಳ್ಳೆಯದು ಎನ್ನುತ್ತಾರೆ.

ಚಾಮುಂಡಿಬೆಟ್ಟ ಯೋಜನೆ ನೀಲನಕ್ಷೆ: ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆಯ ರೂಪುರೇಷೆಯನ್ನು ಯಶಸ್ವಿನಿ ಶರ್ಮಾ ಎಂಬುವವರು ಸಿದ್ಧಪಡಿಸಿದರು, ಅವರು ಮೈಸೂರಿಗೆ ಬಂದು ನೀಲನಕ್ಷೆ ತಯಾರಿಸಿದರು. ಆದರೆ, ಅವರ ಜಾಗಕ್ಕೆ ತರಾಶ್​ ಎಂಬ ವ್ಯಕ್ತಿಯನ್ನು ನೇಮಿಸಿದ್ದು, ಆತ ಸರಿಯಾಗಿ ಈ ಯೋಜನೆ ರೂಪಿಸಿಲ್ಲ, ಇದು ಚಾಮುಂಡಿ ಬೆಟ್ಟದ ಪರಿಸರಕ್ಕೆ ತೊಡಕಾಗುವ ರೀತಿಯಲ್ಲಿ ರೂಪಿಸಲಾಗಿದೆ.

ಆದ್ದರಿಂದ ಈ ಯೋಜನೆ ಚಾಮುಂಡಿ ಬೆಟ್ಟದಲ್ಲಿ ಆರಂಭವಾಗುವ ಮುನ್ನ ಜನಾಭಿಪ್ರಾಯ ಪಡೆಯಬೇಕು, ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಚಾಮುಂಡಿ ಬೆಟ್ಟ ಹೇಗಿತ್ತು ಎಂಬುದನ್ನ ಟಿವಿಯಲ್ಲಿ ತೋರಿಸಬೇಕಾಗುತ್ತದೆ ಎಂಬ ಹಲವಾರು ವಿಚಾರಗಳ ಬಗ್ಗೆ ಪಾರಂಪರಿಕ ತಜ್ಞರಾದ ರಂಗರಾಜನ್ ವಿವರಿಸುತ್ತಾರೆ.

ಜೀವ ವೈವಿಧ್ಯಗಳಿಗೆ ಆಶ್ರಯ ತಾಣ: ರವಿಕುಮಾರ್ ಪರಿಸರ ತಜ್ಞ ಅಭಿಪ್ರಾಯ ವ್ಯಕ್ತಪಡಿಸಿ, ಚಾಮುಂಡಿ ಬೆಟ್ಟ ನೈಸರ್ಗಿಕವಾಗಿ ಹಲವಾರು ಜೀವ ವೈವಿಧ್ಯಗಳಿಗೆ ಆಶ್ರಯ ತಾಣವಾಗಿದೆ. ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ, ಅದನ್ನು ಪವಿತ್ರ ಕ್ಷೇತ್ರವಾಗಿ ಉಳಿಸಿಕೊಳ್ಳಬೇಕು. ಇದೊಂದು ವಾಣಿಜ್ಯ ಕ್ಷೇತ್ರ ಆಗುವುದು ಬೇಡ. ಈಗಾಗಲೇ ಹಲವಾರು ಯೋಜನೆಗಳಿಂದ ಬೆಟ್ಟ ಕಾಂಕ್ರೀಟ್ ಕಾಡಗುತ್ತಿದೆ. ಇದರಿಂದ ಸೂಕ್ಷ್ಮ ಪರಿಸರ ವಲಯಕ್ಕೆ ತೊಂದರೆ ಆಗುತ್ತಿದೆ. ಆದ್ದರಿಂದ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ಪ್ರಸಾದ್ ಯೋಜನೆ ಜಾರಿಗೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ರಿಸರ್ವ್ ಫಾರೆಸ್ಟ್ ಚಾಮುಂಡಿ ಬೆಟ್ಟ:ಜಗತ್ತಿನಲ್ಲೇ ನಗರದ ಒಳಗೆ ಇರುವ ರಿಸರ್ವ್ ಫಾರೆಸ್ಟ್ ಎಂದರೆ ಅದು ಚಾಮುಂಡಿ ಬೆಟ್ಟ. ಇದು ಮೈಸೂರು ನಗರದಲ್ಲಿ ಇರುವುದು ಮತ್ತೊಂದು ಹೆಮ್ಮೆ. ಈ ಬೆಟ್ಟದಲ್ಲಿ 550 ಸಸ್ಯರಾಶಿ ಪ್ರಭೇದ ಹಾಗೂ ಗಿಡಮೂಲಿಕೆಗಳ ಗಿಡಗಳು ಇಲ್ಲಿವೆ. 105 ಜಾತಿಯ ಚಿಟ್ಟೆಗಳು, ಸುಮಾರು 100 ಜಾತಿಯ ಪಕ್ಷಿಗಳು ಈ ಚಾಮುಂಡಿ ಬೆಟ್ಟದಲ್ಲಿವೆ. ಈ ಬೆಟ್ಟದಿಂದ ಸುತ್ತಮುತ್ತ ಇರುವ 20 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗುತ್ತದೆ. ಅಷ್ಟೊಂದು ವೈವಿಧ್ಯಮಯ ಜೀವರಾಶಿಗಳ ತಾಣವಾಗಿರುವ ಚಾಮುಂಡಿ ಬೆಟ್ಟಕ್ಕೆ ಪ್ರಸಾದ್ ಯೋಜನೆಯನ್ನು ಜಾರಿಗೆ ತಂದರೆ ಇಲ್ಲಿ ನೈಸರ್ಗಿಕವಾಗಿರುವ ಬೆಟ್ಟದ ಅಲಂಕಾರ ಹೋಗಿ ಕೃತಕವಾಗಿರುವ ಅಲಂಕಾರ ಬರುತ್ತದೆ.

ಮೂಲ ಸೌಕರ್ಯ ಒದಗಿಸಿ:ಈ ಯೋಜನೆ ಕೇವಲ ಅಲಂಕಾರಿಕ ಯೋಜನೆ ಅಗಿದ್ದು, ಇದಕ್ಕಿಂತ ಮುಖ್ಯವಾಗಿ ಚಾಮುಂಡಿ ಬೆಟ್ಟದಲ್ಲಿ ಮೂಲ ಸೌಕರ್ಯಗಳನ್ನು ಭದ್ರಪಡಿಸಿ, ಸುಸ್ಥಿರ ಅಭಿವೃದ್ಧಿಗೆ ಒತ್ತುನೀಡಿ, ಇದಕ್ಕೆ ಪೂರಕವಾದ ಯೋಜನೆಗಳನ್ನು ಮಾಡಿ, ಮುಖ್ಯವಾಗಿ ಪ್ರಸಾದ್ ಯೋಜನೆಯನ್ನು ಪುನರ್ ವಿಮರ್ಶೆ ಮಾಡಿ, ಯಾರು ಯಾವುದಕ್ಕೂ ವಿರೋಧಿಗಳಲ್ಲ ಎಂದು ಸಲಹೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಜಾರಿಯಿಂದ ಆಗುವ ಪರಿಣಾಮಗಳ ಬಗ್ಗೆ ಪರಿಸರ ತಜ್ಞ ರವಿಕುಮಾರ್ ವಿವರಿಸಿ, ಈ ಯೋಜನೆ ಜಾರಿಗೆ ಮುನ್ನ ಜನಾಭಿಪ್ರಾಯ ಪಡೆಯಿರಿ ಎಂದು ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.

ಇದನ್ನೂಓದಿ:ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ.. ರೋಡ್ ಶೋ ನಡೆಸುತ್ತಿರುವ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.