ETV Bharat / state

ರೇವತಿ ನಕ್ಷತ್ರದಲ್ಲಿ ಜರುಗಿದ ಮೈಸೂರು ಚಾಮುಂಡೇಶ್ವರಿ ವರ್ಧಂತಿ ಉತ್ಸವ..

ಆಷಾಡ ಮಾಸದ ಕೃಷ್ಣ ಪಕ್ಷ ರೇವತಿ ನಕ್ಷತ್ರದಲ್ಲಿ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ವರ್ಧಂತಿ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಭ್ರಮದಿಂದ ಜರುಗಿತು. ಈ ಉತ್ಸವಕ್ಕೆ ರಾಜ ವಂಶಸ್ಥರು ಚಾಲನೆ ನೀಡಿದರು.

ಚಾಮುಂಡೇಶ್ವರಿಯ ಉತ್ಸವ ಮೂರ್ತಿ
ಚಾಮುಂಡೇಶ್ವರಿಯ ಉತ್ಸವ ಮೂರ್ತಿ
author img

By

Published : Jul 10, 2023, 1:56 PM IST

Updated : Jul 10, 2023, 2:56 PM IST

ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ವರ್ಧಂತಿ ಮಹೋತ್ಸವ

ಮೈಸೂರು: ಇಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿದೆ. ಈ ವರ್ಧಂತಿಗೆ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ ಮಾತೆ ಪ್ರಮೋದದೇವಿ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಚಿನ್ನದ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆಯ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.

ಬೆಳಗಿನ ಜಾವ 4:30 ರಿಂದಲೇ ಉತ್ಸವ ಮೂರ್ತಿಗೆ ಅಭ್ಯುಂಜನ ಸ್ನಾನ, ಪಂಚಾಮೃತ ಅಭಿಷೇಕ ಹಾಗೂ ಉತ್ಸವ ಮೂರ್ತಿಗೆ ಚಾಮುಂಡೇಶ್ವರಿ ಅಲಂಕಾರ ಮಾಡಿರುವುದು ವಿಶೇಷವಾಗಿತ್ತು. ರಾಜವಂಶಸ್ಥರು ಮೂಲ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ, ನಂತರ ವರ್ಧಂತಿಗೆ ಚಾಲನೆ ನೀಡಿದರು.

ವರ್ಧಂತಿ ಹಿನ್ನೆಲೆಯಲ್ಲಿ ದೇವಾಲಯದ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗಿನಿಂದಲೇ ದೇವಾಲಯಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ತಾಯಿಯ ವರ್ಧಂತಿಗೆ ಆಗಮಿಸಿದ ರಾಜವಂಶಸ್ಥ ಯದುವೀರ್ ಒಡೆಯರ್ ವರ್ಧಂತಿಗೆ ಚಾಲನೆ ನೀಡಿ, ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇಂದು ಮೈಸೂರಿನ ರಾಜವಂಶಸ್ಥರು ಚಾಮುಂಡಿ ಬೆಟ್ಟಕ್ಕೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ ದಿನ. ಆದ್ದರಿಂದ ಈ ದಿನವನ್ನು ವರ್ಧಂತಿ ಎಂದು ಕರೆಯುತ್ತೇವೆ. ಜಗನ್ಮಾತೆ ಚಾಮುಂಡೇಶ್ವರಿ ರಾಜ್ಯ ಹಾಗೂ ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ವರ್ಧಂತಿ ಎಂಬುದು ಸಂಸ್ಕೃತ ಪದ, ಕನ್ನಡದಲ್ಲಿ ಹುಟ್ಟುಹಬ್ಬ ಎನ್ನುವ ಅರ್ಥ ಬರುತ್ತದೆ. ಈ ದಿನ ವರ್ಧಂತಿ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿ, ಬೆಳಗಿನ ಜಾವ 4:30 ರಲ್ಲಿ ಅಭ್ಯುಂಜನ ಸ್ನಾನ ನಂತರ ಪಂಚಾಮೃತ ಅಭಿಷೇಕ, 9:30 ಕ್ಕೆ ಮಹಾಮಂಗಳಾರತಿ, ಬೆಳಗ್ಗೆ 10:30ಕ್ಕೆ ಚಾಮುಂಡಿ ಬೆಟ್ಟದ ಮುಂಭಾಗದಲ್ಲಿ ರಾಜವಂಶಸ್ಥರು ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.

ಸಂಜೆ 6.30 ರಿಂದ 7:30 ರ ವರೆಗೆ ಅಭಿಷೇಕ ಇರುತ್ತದೆ. ರಾತ್ರಿ 8:30ಕ್ಕೆ ಮಹಾರಾಜರ ದರ್ಬಾರ್ ಉತ್ಸವ ರೀತಿಯಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ದರ್ಬಾರ್ ಉತ್ಸವ ನಡೆಯಲಿದೆ. ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿಯಲ್ಲೇ ವರ್ಧಂತಿಯನ್ನು ಆಚರಣೆ ಮಾಡಲಾಗುತ್ತದೆ ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ವಿವರಿಸಿದರು.

ವರ್ಧಂತಿ ಹಿನ್ನೆಲೆಯಲ್ಲಿ ಭಕ್ತರ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ನಿಷೇಧ ಹೇರಲಾಗಿದ್ದು. ಜನರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಲಿತ್ ಮಹಲ್ ಮೈದಾನದಿಂದ ಸಾರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು. ಬೆಳಗ್ಗೆ 9:30 ರಿಂದ ರಾತ್ರಿ 8:30 ರವರೆಗೆ ಉಚಿತ ಬಸ್ ಸೇವೆ ಇರಲಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿಯಾದ ಪೊಲೀಸ್ ಬಂದೋಬಸ್ತ್​ನ್ನು ಡಿಸಿಪಿ ನೇತೃತ್ವದಲ್ಲಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳಿಗೆ ಶಾಸ್ತ್ರೋಕ್ತ ಮದುವೆ

Last Updated : Jul 10, 2023, 2:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.