ಮೈಸೂರು: ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸಲು ಹಾಗೂ ಕಾಮಗಾರಿಗಾಗಿ ದೊಡ್ಡಪ್ರಮಾಣದ ಮಣ್ಣಿನ ಅಗತ್ಯವಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳ ಹೂಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ತಹಶೀಲ್ದಾರ್ ರಕ್ಷಿತ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಈ ಸೂಚನೆ ನೀಡಿದರು.
ಮೈನ್ಸ್ ಅಂಡ್ ಜಿಯೋಲಜಿ ಇಲಾಖೆಗೆ ಒಂದು ಕ್ಯೂಬಿಕ್ ಮೀಟರ್ಗೆ ನಿಗದಿಪಡಿಸಿರುವ ಸರ್ಕಾರದ ಬೆಳೆಯನ್ನು ಡಿಬಿಎಲ್ ನೀಡುವುದು ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಿಕ್ಕಿದಂತ್ತಾಗುತ್ತದೆ, ಈ ಹಿನ್ನೆಲೆ ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳ ಮಣ್ಣನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
ಸತ್ಯನಾಯಕಹಳ್ಳಿ ಕೆರೆ, ನಾಗವಲಕೆರೆ, ಹುಯಿಳಾಲುಕೆರೆ, ಬೊಮ್ಮೆನಹಳ್ಳಿಕೆರೆ, ಜೆಟ್ಟಿಹುಂಡಿಕೆರೆ, ಹುಯಿಳಾಲು ಕಟ್ಟೆ, ಕೆ.ಹೆಮ್ಮನಹಳ್ಳಿ ಕೆರೆಯ ಮಣ್ಣುಗಳನ್ನು ಬಳಸಿಕೊಳ್ಳಲು ಸೂಚನೆ ನೀಡಲಾಯಿತು.
ಇದನ್ನೂ ಓದಿ: ಗ್ರಾ.ಪಂ ಚುನಾವಣೆ: ನಿಯೋಜಿಸಿದ ಸ್ಥಳಕ್ಕೆ ತೆರಳಲು ಸಜ್ಜಾದ ಚುನಾವಣೆ ಸಿಬ್ಬಂದಿ