ಮೈಸೂರು: ಸ್ಮಶಾನ ರಸ್ತೆ ಒತ್ತುವರಿಯಾಗಿದ್ದರಿಂದ ಬೇರೆ ಮಾರ್ಗವಿಲ್ಲದೆ ಶವವನ್ನು ಕೆಸರು ಗದ್ದೆಯಲ್ಲೇ ಹೊತ್ತೊಯ್ದ ಘಟನೆ ತಿ.ನರಸೀಪುರ ತಾಲೂಕಿನ ಮರಡೀಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೃದ್ಧರು ಮೃತಪಟ್ಟ ಹಿನ್ನೆಲೆ ಅವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಹೊರಡುವಾಗ ರಸ್ತೆಯಿಲ್ಲದೇ ಜಮೀನಿನ ಮಧ್ಯೆ ಶವವನ್ನು ಹೊತ್ತು ಸಾಗಿದ್ದಾರೆ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಸ್ಮಶಾನ ಜಾಗ ಕಲ್ಪಿಸಿದೇ ಇರುವುದು ಗ್ರಾಮಸ್ಥರಿಗೆ ಅಸಮಾಧಾನ ತಂದಿದೆ.
ಎಷ್ಟೇ ಬಾರಿ ಮನವಿ ಮಾಡಿದರೂ ಸ್ಮಶಾನದ ರಸ್ತೆ ಒತ್ತುವರಿ ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಈಗಲಾದರೂ ನಕಾಶೆಯಲ್ಲಿರುವಂತೆ ರಸ್ತೆ ಒತ್ತುವರಿ ತೆರವುಗೊಳಿಸದಿದ್ದರೆ ಸಂಘಟನೆಗಳ ಜೊತೆಗೂಡಿ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.