ETV Bharat / state

ಪಾರಂಪರಿಕ ಮೈಸೂರು ರೈಲ್ವೆ ನಿಲ್ದಾಣಕ್ಕೆ 140 ವರ್ಷಗಳ ಸಂಭ್ರಮ.. ಕೇಕ್ ಕತ್ತರಿಸಿ ಸಂಭ್ರಮಾಚರಣೆ - ​ ETV Bharat Karnataka

140 ವರ್ಷಗಳ ಹಿಂದೆ ಮೈಸೂರು ರೈಲು ನಿಲ್ದಾಣದ ಕಟ್ಟಡವನ್ನು ಉದ್ಘಾಟಿಸಿದ ನೆನಪಿಗಾಗಿ ‘ನಿಲ್ದಾಣ ಮಹೋತ್ಸವ’ ಕಾರ್ಯಕ್ರಮ ನಡೆಯಿತು. ​

ನಿಲ್ದಾಣ ಮಹೋತ್ಸವ
ನಿಲ್ದಾಣ ಮಹೋತ್ಸವ
author img

By ETV Bharat Karnataka Team

Published : Dec 1, 2023, 5:58 PM IST

ಮೈಸೂರು : 140 ವರ್ಷ ತುಂಬಿದ ಮೈಸೂರು ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಕೇಕ್ ಕತ್ತರಿಸಿ ನಿಲ್ದಾಣ ಮಹೋತ್ಸವವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪ ಆಗರ್ವಾಲ್ ಹಾಗೂ ಅಧಿಕಾರಿಗಳು ಆಚರಣೆ ಮಾಡಿದರು. 1881 ರಲ್ಲಿ ಆಗಿನ ಮೈಸೂರು ಸಂಸ್ಥಾನವು ಈ ದಿನದಂದು ಅಂದರೆ 140 ವರ್ಷಗಳ ಹಿಂದೆ ಮೈಸೂರು ರೈಲ್ವೆ ನಿಲ್ದಾಣ ಕಟ್ಟಡದ ಉದ್ಘಾಟನೆ ನಡೆಸಿದ್ದರ ನೆನೆಪಿಗಾಗಿ ಮೈಸೂರು ರೈಲು ನಿಲ್ದಾಣದಲ್ಲಿ ‘ನಿಲ್ದಾಣ ಮಹೋತ್ಸವ’ ಕಾರ್ಯಕ್ರಮ ನಡೆಯಿತು.

ಇದರ ಮುಖ್ಯ ಉದ್ದೇಶ ಎಂದರೆ ರೈಲ್ವೆ ನೌಕರರು ಮತ್ತು ಸ್ಥಳೀಯ ಜನರಿಗೆ ರೈಲ್ವೆ ವ್ಯವಸ್ಥೆಯ ಸ್ಥಾಪನೆಯ ಇತಿಹಾಸ ಮತ್ತು ಅದರ ಪಾರಂಪರಿಕ ಆಸ್ತಿಗಳಾದ ರೈಲ್ವೆ ನಿಲ್ದಾಣಗಳು, ಉಪಯೋಗಿಸುವ ಉಪಕರಣಗಳು, ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ರೈಲ್ವೆ ನಿಲ್ದಾಣದೊಂದಿಗೆ ಜನರ ಸಂಬಂಧವನ್ನು ಪ್ರದರ್ಶಿಸುವುದು ಇದರ ಮುಖ್ಯ ಕಾರಣವಾಗಿದೆ.

ಮೈಸೂರು ರೈಲು ನಿಲ್ದಾಣವನ್ನು ಡಿಸೆಂಬರ್ 1, 1881 ರಂದು ಅಂದಿನ ಮೈಸೂರು ರಾಜ್ಯ ರೈಲ್ವೆಯಿಂದ ಔಪಚಾರಿಕವಾಗಿ ತೆರೆಯಲಾಯಿತು. ಈ ರೈಲು ಯೋಜನೆಯು 86 ಮೈಲಿಗಳ ಮೀಟರ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರ ಮತ್ತು ಮೈಸೂರನ್ನು ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಈ ರೈಲು ಮಾರ್ಗವು ಆರಂಭದಲ್ಲಿ ಕ್ಷಾಮ ಪರಿಹಾರ ಉಪಕ್ರಮವಾಗಿ ಕಾರ್ಯ ನಿರ್ವಹಿಸಿತು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ದೂರದ ಪ್ರದೇಶಗಳಿಗೆ ಆಹಾರ ಸಾಗಿಸುವುದು ಮತ್ತು ಸಂಬಳ/ಕೂಲಿಗೆ ಬದಲಾಗಿ ಧಾನ್ಯಗಳನ್ನು ನೀಡಿ ರೈಲು ಮಾರ್ಗದ ನಿರ್ಮಾಣದಲ್ಲಿ ಜನರನ್ನು ತೊಡಗಿಸಿಕೊಳ್ಳುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು.

ಈ ಘಟನೆಯು ಒಂದರ್ಥದಲ್ಲಿ ರೈಲ್ವೆಯ ಶ್ರೀಮಂತ ಮತ್ತು ಜವಾಬ್ದಾರಿ ಪರಂಪರೆಯ ಆಚರಣೆಯಾಗಿತ್ತು ಮತ್ತು ಸ್ಥಳಗಳ ನಡುವೆ ಸಂಪರ್ಕ ಬೆಳೆಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮೈಸೂರಿನ ಅಭಿವೃದ್ಧಿ ಮತ್ತು ಪ್ರಗತಿಯ ಯುಗವನ್ನು ಪ್ರತಿಬಿಂಭಿಸುತ್ತದೆ. ಈ ಸರಳ ಸಮಾರಂಭದಲ್ಲಿ ಈ ರೈಲ್ವೆಯಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದ ಮತ್ತು ಈ ಪರಂಪರೆ ಮುನ್ನಡೆಸುವಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ವ್ಯಕ್ತಿಗಳ ಕೊಡುಗೆಗಳನ್ನು ಗುರುತಿಸಲಾಯಿತು. ಅಲ್ಲದೇ ಮೈಸೂರಿನ ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸ್ಮರಣೀಯ ಕಾರ್ಯಕ್ರಮದ ಮತ್ತಷ್ಟು ವಿಶೇಷವಾಗಿದ್ದವು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ಅವರು ಈ ಸಮಾರಂಭಕ್ಕೆ ಆಹ್ವಾನಿಸಿದ ಗಣ್ಯ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಮ್ಮ ಚುಟುಕು ಭಾಷಣದಲ್ಲಿ ಅವರು, ಮರುಕಳಿಸುವ ಕ್ಷಾಮಗಳಿಗೆ ಸಾಕ್ಷಿಯಾದ ಈ ಪ್ರದೇಶದ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರಲು 19ನೇ ಶತಮಾನದ ಉತ್ತರಾರ್ಧದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಾಪಿಸಲು ಆಗಿನ ಮೈಸೂರು ಸಾಮ್ರಾಜ್ಯದ ಆಡಳಿತಗಾರರ ದೂರಾಲೋಚನೆ ಮತ್ತು ದೂರದೃಷ್ಟಿಯನ್ನು ಅವರು ಸ್ಮರಿಸಿಕೊಂಡರು.

ಮೈಸೂರು ರೈಲು ನಿಲ್ದಾಣವು ಶೀಘ್ರದಲ್ಲಿಯೇ ವಿಶ್ವದರ್ಜೆಯ ನಿಲ್ದಾಣವಾಗುವ ಹೊಸ್ತಿಲಲ್ಲಿದ್ದು, ಭವಿಷ್ಯದಲ್ಲಿನ ಜನ ದಟ್ಟಣೆಯ ಹೆಚ್ಚಿನ ಬೆಳವಣಿಗೆಗೆ ನಿಲ್ದಾಣವನ್ನು ತಯಾರು ಮಾಡುವ ಮೂಲಕ ಜನರ ಪ್ರಯಾಣದ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ಆಧುನಿಕ ಸೌಕರ್ಯಗಳನ್ನು ಒದಗಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ : ರಂಗನತಿಟ್ಟು ಪಕ್ಷಿಧಾಮದಲ್ಲಿ ವಿದೇಶಿ ಪಕ್ಷಿಗಳ ಕಲರವ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.