ETV Bharat / state

ಹುಕ್ಕಾ ಸೆಂಟರ್​ಗಳ ಮೇಲೆ ಸಿಸಿಬಿ ದಾಳಿ.. ಇಬ್ಬರ ಬಂಧನ.. 62 ಸಾವಿರ ರೂ. ದಂಡ

author img

By

Published : Aug 6, 2019, 11:02 PM IST

ಮೈಸೂರಿನಲ್ಲಿ ಪ್ರತ್ಯೇಕ 2 ಹುಕ್ಕಾ ಸೆಂಟರ್​ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೋಟ್ಪಾ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ 62 ಸಾವಿರ ರೂ. ದಂಡ ವಿಧಿಸಿದ್ದಾರೆ.

ಹುಕ್ಕಾ ಸೆಂಟರ್​ಗಳ ಮೇಲೆ ಸಿಸಿಬಿ ದಾಳಿ

ಮೈಸೂರು: ಪ್ರತ್ಯೇಕ 2 ಹುಕ್ಕಾ ಸೆಂಟರ್​ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೋಟ್ಪಾ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ 62 ಸಾವಿರ ರೂ. ದಂಡ ವಿಧಿಸಿದ್ದಾರೆ.

ಕಾಳಿದಾಸ ರಸ್ತೆಯಲ್ಲಿರುವ 18 ಪ್ಲಸ್ ಐಸ್ ಕೆಫೆಯಲ್ಲಿ ಅಪ್ರಾಪ್ತರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟು ಹುಕ್ಕಾ ಬಾರ್ ನಡೆಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೆಫೆಯ ಮ್ಯಾನೇಜರ್‌ ರಾಘವೇಂದ್ರ ಮತ್ತು ನಗರದ ಜೆಎಸ್‌ಎಸ್ ಲೇಔಟ್‌ನ ಹೆಚ್ ಪಿ ಪುರುಷೋತ್ತಮ್ ಎಂಬುವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. 31 ಸಾವಿರ ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ, ಹುಕ್ಕಾ ಬಾರ್ ಮುಚ್ಚಿಸಲಾಗಿದೆ.

ಅದೇ ರೀತಿ, ಲಲಿತ ಮಹಲ್ ಹೆಲಿಪ್ಯಾಡ್ ಎದುರು ದೇವರಾಜ ಡಾಬಾದ ಪಕ್ಕದಲ್ಲಿರುವ ಚಾರ್‌ಕೋಲ್ ಸರ್ಕ್ಯೂಟ್ ಕೆಫೆ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ಮಾಡಲಾಗಿದೆ. ಕೆಫೆಯ ಮ್ಯಾನೇಜರ್‌ ಟಿ ಕೆ ಲೇಔಟ್ ನಿವಾಸಿ ಲೋಹಿತ್ ವಿರುದ್ದ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಂಡು 30,800 ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ ಹುಕ್ಕಾ ಬಾರ್ ಮುಚ್ಚಿಸಲಾಗಿದೆ.

Intro:ಸಿಸಿಬಿBody:ಮೈಸೂರು: ಪ್ರತ್ಯೇಕ ಎರಡು ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಂಧಿಸಿ ೬೨ ಸಾವಿರ ದಂಡ ವಿಧಿಸಿದ್ದಾರೆ.
ಕಾಳಿದಾಸ ರಸ್ತೆಯಲ್ಲಿರುವ ೧೮ಪ್ಲಸ್ ಐಸ್ ಕೆಫೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ, ಅಪ್ರಾಪ್ರರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟು
ಹುಕ್ಕಾ ಬಾರ್ ನಡೆಸುತ್ತಿದ್ದ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೆಫೆಯ ಮ್ಯಾನೇಜರ್‌ರಾದ ರಾಘವೇಂದ್ರ ನಗರದ ಜೆಎಸ್‌ಎಸ್ ಲೇಔಟ್‌ನ ಎಚ್.ಪಿ.ಪುರುಷೋತ್ತಮ್(೨೩) ವಿರುದ್ಧ ಕೋಟ್ಟಾ ಕಾಯ್ದೆಯಡಿ ಕ್ರಮ ಕೈಗೊಂಡು ೩೧,೨೦೦ ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ, ಹುಕ್ಕಾ ಬಾರ್ ಮುಚ್ಚಿಸಲಾಗಿದೆ.
ಅದೇ ರೀತಿ, ಲಲಿತ ಮಹಲ್ ಹೆಲಿಪ್ಯಾಡ್ ಎದುರು, ದೇವರಾಜ ಡಾಬಾದ ಪಕ್ಕದಲ್ಲಿ ಇರುವ ಚಾರ್‌ಕೋಲ್ ಸರ್ಕ್ಯೂಟ್ ಕೆಫೆ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ, ಕೋಟ್ಪಾ ಕಾಯ್ದೆಯ ನಿಯಮಗಳಿಗೆ ವಿರುದ್ದವಾಗಿ ಅಪ್ರಾಪ್ರರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಸಂಬಂದ  ಈ ಕೆಫೆಯ ಮ್ಯಾನೇಜರ್‌ರಾದ ಟಿ.ಕೆ.ಲೇಔಟ್ ನಿವಾಸಿ ಲೋಹಿತ್(೨೩) ವಿರುದ್ದ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಂಡು ೩೦,೮೦೦ ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ,  ಹುಕ್ಕಾ ಬಾರ್ ಮುಚ್ಚಿಸಲಾಗಿದೆ.Conclusion:ಸಿಸಿಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.