ETV Bharat / state

ಸಿಸಿಬಿ ಪೊಲೀಸರಿಂದ ಭರ್ಜರಿ ಬೇಟೆ: 80 ಲಕ್ಷ ಮೌಲ್ಯದ 750 ಕೆಜಿ ರಕ್ತಚಂದನ ವಶ - ಶೇಖರಿಸಿಟ್ಟಿದ್ದ 750ಕೆ.ಜಿ ರಕ್ತಚಂದನ

80 ಲಕ್ಷ ರೂ. ಮೌಲ್ಯದ 750 ಕೆ.ಜಿ ತೂಕದ ರಕ್ತ ಚಂದನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ceased 750kgs of Raktachandan
750 ಕೆ.ಜಿ. ರಕ್ತಚಂದನ ವಶ
author img

By

Published : Dec 21, 2019, 11:42 PM IST

ಮೈಸೂರು: ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸಂಚು ರೂಪಿಸಿ ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಶೇಖರಿಸಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿ, 80 ಲಕ್ಷ ರೂ. ಬೆಲೆ ಬಾಳುವ 750 ಕೆ.ಜಿ.ತೂಕದ 80 ರಕ್ತ ಚಂದನ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಷ್ಕರ್ ಮೊಹಲ್ಲಾ ನಿವಾಸಿ ಫೈರೋಜ್ ಅಲಿಖಾನ್(32) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯ 7ನೇ ಕ್ರಾಸ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರಕ್ತ ಚಂದನದ ಮರಗಳನ್ನು ಅಕ್ರಮವಾಗಿ ಖರೀದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹಡಗಿನ ಮೂಲಕ ಮಾರಾಟ ಮಾಡುವ ಸಂಚನ್ನು ರೂಪಿಸಿರುವುದಾಗಿ ತಿಳಿಸಿದ್ದಾನೆ.

ಈ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನಂತರ ಈತನ ಮನೆಯಲ್ಲಿ ಹಾಗೂ ಕ್ವಾಲಿಸ್ ವಾಹನದಲ್ಲಿದ್ದ 750 ಕೆ.ಜಿ. ತೂಕದ ರಕ್ತ ಚಂದನದ 80 ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Intro:ರಕ್ತಚಂದನBody:ಮೈಸೂರು: ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸಂಚು ರೂಪಿಸಿ ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಶೇಖರಿಸಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿ, ೮೦ ಲಕ್ಷ ರೂ.ಬೆಲೆಬಾಳುವ ೭೫೦ ಕೆ.ಜಿ.ತೂಕದ ೮೦ ರಕ್ತ ಚಂದನ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾ ನಿವಾಸಿ ಫೈರೋಜ್ ಅಲಿಖಾನ್(೩೨) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯ ೭ನೇ ಕ್ರಾಸ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಮನೆಯ ಮುಂಭಾಗ ನಿಂತಿದ್ದ ಕ್ವಾಲೀಸ್ ವಾಹನದಲ್ಲಿದ್ದ ಈತನನ್ನು ವಶಕ್ಕೆ ವಿಚಾರಣೆ ಮಾಡಿದಾಗ,  ರಾಜ್ಯ ಹಾಗೂ ಹೊರರಾಜ್ಯಗಳಿಂದ ರಕ್ತ ಚಂದನದ ಮರಗಳನ್ನು ಅಕ್ರಮವಾಗಿ ಖರೀದಿಸಿ ಗೌಪ್ಯವಾಗಿಟ್ಟು ಅವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹಡಗಿನ ಮೂಲಕ ಮಾರಾಟ ಮಾಡುವ ಸಂಚನ್ನು ರೂಪಿಸಿರುವುದಾಗಿ ತಿಳಿಸಿದರ ಮೇರೆಗೆ ಈತನ  ಮನೆಯಲ್ಲಿ ಹಾಗೂ ಆತ ಕುಳಿತಿದ್ದ ಕ್ವಾಲಿಸ್ ವಾಹನದಿಂದ ರೂ. ೮೦ ಲಕ್ಷ ರೂ. ೭೫೦ ಕೆ.ಜಿ. ತೂಕದ ರಕ್ತ ಚಂದನದ ೮೦ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಪಿ ಎಂ.ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಬಿ ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಸಿ.ಕಿರಣ್‌ಕುಮಾರ್, ಮಂಡಿ ಠಾಣೆ ಇನ್‌ಸ್ಪೆಕ್ಟರ್ ಅರುಣ್, ಸಿಸಿಬಿ ಎಎಸ್‌ಐ ಚಂದ್ರೇಗೌಡ, ಅಲೆಗ್ರಾಂಡರ್, ರಾಜು, ಸುಭಾಷ್ ಚಂದ್ರ, ಸಿಬ್ಬಂದಿಗಳಾದ ಸಿ.ಚಿಕ್ಕಣ್ಣ, ಸಿ.ಎನ್.ಶಿವರಾಜು, ಎಂ.ಆರ್.ಗಣೇಶ್, ರಾಮಸ್ವಾಮಿ, ಅಸ್ಗರ್‌ಖಾನ್, ಪಿ.ಎಸ್.ಲಕ್ಷ್ಮಿಕಾಂತ್, ಯಾಕೂಬ್ ಷರೀಪ್, ಚಂದ್ರಶೇಖರ್,ನಿರಂಜನ್,ಆನಂದ, ಅನಿಲ್ ಗೌತಮ್, ಚಾಮುಂಡಮ್ಮ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.Conclusion:ರಕ್ತಚಂದನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.