ETV Bharat / state

cauvery issue: ಟಿ.ನರಸೀಪುರ ಬಂದ್​ಗೆ ಉತ್ತಮ ಪ್ರತಿಕ್ರಿಯೆ.. ಬ್ರಾಹ್ಮಣ ಸಂಘದಿಂದ ಜಾಗಟೆ, ಘಂಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಮೈಸೂರು ಬ್ರಾಹ್ಮಣ ಸಂಘ ಪ್ರತಿಭಟನೆ ನಡೆಸಿದೆ. ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಟಿ.ನರಸೀಪುರ ಬಂದ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

cauvery-issue-good-response-to-t-naraseepur-bandh
cauvery issue: ಟಿ.ನರಸೀಪುರ ಬಂದ್​ಗೆ ಉತ್ತಮ ಪ್ರತಿಕ್ರಿಯೆ.. ಬ್ರಾಹ್ಮಣ ಸಂಘದಿಂದ ಶಂಖ, ಜಾಗಟೆ, ಘಂಟೆ ಬಾರಿಸಿ ವಿನೂತನ ಪ್ರತಿಭಟನೆ
author img

By ETV Bharat Karnataka Team

Published : Sep 26, 2023, 12:43 PM IST

Updated : Sep 26, 2023, 4:23 PM IST

ಟಿ.ನರಸೀಪುರ ಬಂದ್​ಗೆ ಉತ್ತಮ ಪ್ರತಿಕ್ರಿಯೆ.. ಬ್ರಾಹ್ಮಣ ಸಂಘದಿಂದ ಜಾಗಟೆ, ಘಂಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಮೈಸೂರು ಜಿಲ್ಲೆಯಾದ್ಯಂತ ಪ್ರತಿಭಟನೆ, ಬಂದ್​ ನಡೆಸುತ್ತಿದ್ದಾರೆ. ತಮಿಳು ನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್​ ಕಾವೇರಿ ನೀರನ್ನು ಹರಿಸುತ್ತಿರುವುದರಿಂದ ರೈತಾಪಿ ಕೃಷಿ ವರ್ಗಕ್ಕೆ, ಕುಡಿಯುವ ನೀರಿಗೆ ಆಗುತ್ತಿರುವ ಅನ್ಯಾಯ ಹಾಗೂ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ನೇತೃತ್ವದಲ್ಲಿಂದು ವಿಪ್ರ ಸಮುದಾಯದವರು ಶಂಖ, ಜಾಗಟೆ, ಘಂಟೆ ಬಾರಿಸಿ ಸಾಮೂಹಿಕ ಭಜನೆ ಮಾಡುವ ಮೂಲಕ ಜಿಲ್ಲಾ ಪಂಚಾಯಿತಿ ಎದುರುಗಡೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಕನ್ನಡ ನೆಲ, ಜಲ, ಭಾಷೆ ವಿಚಾರವಾಗಿ ಧಕ್ಕೆ ಬಂದಾಗ ಪ್ರತಿಭಟಿಸುವುದು ನ್ಯಾಯ ಕೇಳುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು. ಸುಪ್ರಿಂಕೋರ್ಟ್ ತೀರ್ಪಿಗೆ ತಲೆಬಾಗಬೇಕು ನಿಜ ಆದರೆ ವಾಸ್ತವತೆ, ವೈಜ್ಞಾನಿಕತೆ ವಿಷಯವನ್ನು ತಿಳಿಸುವುದು ನಮ್ಮ ಕರ್ನಾಟಕದ ಜನಪ್ರತಿನಿಧಿಗಳ ಕರ್ತವ್ಯ. ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ನೀರಿಗಾಗಿ ಖ್ಯಾತೆ ತೆಗೆದಾಗ ಅಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳ ನಿಯೋಗ ರಾಷ್ಟ್ರಪತಿ ರಾಜ್ಯಪಲರ ಬಳಿ ಕರ್ನಾಟಕದ ಸಮಸ್ಯೆಯನ್ನು ತಿಳಿಸಿ ನ್ಯಾಯ ಕೊಡಿಸಿದ್ದರು. ಇಂದು ಅಂತಹ ಆರೊಗ್ಯಕರ ಸಮನ್ವಯ ಕಾಣದಿರುವುದು ಬೇಸರದ ಸಂಗತಿ. ಮತ್ತೊಮ್ಮೆ ನ್ಯಾಯಾಲಯ ಕಾವೇರಿ ತೀರ್ಪನ್ನು ಪರಿಶೀಲಿಸಿ 5000 ಕ್ಯೂಸೆಕ್​ ಹೊರಹರಿವು ಚರ್ಚಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠಕುಮಾರ್ ಮಾತನಾಡಿ, ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು. ಇದರಿಂದ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ನೀರಿಗೆ ಸಹಕಾರವಾಗುತ್ತದೆ ಎಂದರು.

ಟಿ.ನರಸೀಪುರ ಬಂದ್​: ಮತ್ತೊಂದೆಡೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಟಿ.ನರಸೀಪುರ ಬಂದ್ ಯಶಸ್ವಿಯಾಗಿದೆ. ನಗರದಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕಾವೇರಿ, ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ನಗರದ ವಿವಿಧ ಸಂಘ-ಸಂಸ್ಥೆಗಳು ಬೆಂಗಳೂರು ಬಂದ್​ಗೆ ಬೆಂಬಲ ಸೂಚಿಸಲು ಇಂದು (ಮಂಗಳವಾರ) ಟಿ.ನರಸೀಪುರ ಬಂದ್​ಗೆ ಕರೆ ನೀಡಿದ್ದವು. ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಳ್ಳಲಿದೆ. ಈಗಾಗಲೇ ಪಟ್ಟಣದ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಿದ್ದಾರೆ.

ಖಾಸಗಿ ಬಸ್​ಗಳ ಸಂಚಾರವೂ ವಿರಳವಾಗಿತ್ತು. ಪ್ರಮುಖ ಬೀದಿಗಳಲ್ಲಿ ಜನರ ಓಡಾಟ ತೀರಾ ಕಡಿಮೆ ಕಂಡುಬಂತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ. ಆದರೂ ಮಕ್ಕಳ ಸಂಖ್ಯೆ ವಿರಳವಾಗಿತ್ತು. ವಿದ್ಯೋದಯ ವೃತ್ತದಿಂದ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಮುನ್ನೆಚ್ಚೆರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕೆಎಸ್​ಒಯು ಪರೀಕ್ಷೆ ಮುಂದೂಡಿಕೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಇದೇ ತಿಂಗಳು 26, 28 ಹಾಗೂ 29 ರಂದು ನಡೆಯಬೇಕಿದ್ದ ಬಿ.ಎ, ಬಿ.ಕಾಂ, ಪ್ರಥಮ ಎಂ.ಎ ಹಾಗೂ ಎಂ.ಕಾಂ ಪರೀಕ್ಷೆಯನ್ನು ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಹಾಗೂ 28 ರಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇರುವುದರಿಂದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ, ಬೆಂಗಳೂರು ಬಂದ್​ಗೆ ಮಿಶ್ರ ಪ್ರತಿಕ್ರಿಯೆ​

Last Updated : Sep 26, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.