ETV Bharat / state

ಬೆಕ್ಕು ಕಳೆದು ಹೋಗಿದೆ ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ: ಹೀಗೊಂದು ಜಾಹೀರಾತು

author img

By

Published : Feb 10, 2022, 4:31 PM IST

ಬೆಕ್ಕಿಗೆ ಬೈದ ಕಾರಣ ಆ ಬೆಕ್ಕು ಮನೆ ಬಿಟ್ಟು ಹೋಗಿದೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಾಣಿಪ್ರಿಯೆ ವಿಜಯಲಕ್ಷ್ಮಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾರೆ.

ವಿಜಯಲಕ್ಷ್ಮಿ
ವಿಜಯಲಕ್ಷ್ಮಿ

ಮೈಸೂರು: ಚೇಷ್ಟೆ ಮಾಡುತ್ತಿದ್ದ ಪ್ರೀತಿಯ ಬೆಕ್ಕಿಗೆ ಬೈದ ಕಾರಣ ಆ ಬೆಕ್ಕು ಮನೆ ಬಿಟ್ಟು ಹೋಗಿದ್ದು. ಅದನ್ನ ಹುಡುಕಿಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಾಣಿಪ್ರಿಯೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾರೆ.

ತಂದೆ ತಾಯಿ ಮಕ್ಕಳಿಗೆ ಬೈದರೆ ಕೋಪಗೊಂಡು ಮನೆ ಬಿಟ್ಟುಹೋಗುವುದನ್ನ ಕೇಳಿದ್ದೇವೆ. ಆದರೆ, ಮೈಸೂರಿನ ನಾಲ ಬೀದಿಯ ವಿಜಯಲಕ್ಷ್ಮಿಯವರು ಬೆಕ್ಕೊಂದ್ದನ್ನು ಸಾಕಿದ್ದರು‌. ಆ ಬೆಕ್ಕು ತುಂಬಾ ಚೆಷ್ಟೆ ಮಾಡುತ್ತಿದ್ದು ಇದರಿಂದ ಕೋಪಗೊಂಡ ವಿಜಯಲಕ್ಷ್ಮಿ ಕೆಂಚು ಹಾಗೂ ಬಿಳಿ ಬಣ್ಣದ 8 ತಿಂಗಳ ಗಂಡು ಬೆಕ್ಕಿಗೆ ಬೈದಿದ್ದಾರೆ. ಹೀಗಾಗಿ ಕಳೆದ 18 ದಿನಗಳಿಂದ ಮನೆ ಬಿಟ್ಟು ಬೆಕ್ಕು ಹೋಗಿದೆ. ದಯವಿಟ್ಟು ಬೆಕ್ಕನ್ನ ಹುಡುಕಿಕೊಡಿ ಎಂದು ಸ್ಥಳೀಯ ಪತ್ರಿಕೆಯಲ್ಲಿ ವಿಜಯಲಕ್ಷ್ಮಿ ಜಾಹೀರಾತು ನೀಡಿದ್ದಾರೆ.

ಜಾಹೀರಾತುವಿನಲ್ಲಿ ಏನಿದೆ ?: ನನ್ನ ಪ್ರೀತಿಯ ೮ ತಿಂಗಳ ಕೆಂಚು ಮತ್ತು ಬಿಳಿ ಬಣ್ಣದ ಬೆಕ್ಕು ಕಳೆದು ಹೋಗಿದೆ ಯಾರಾದರೂ ಈ ಬೆಕ್ಕನ್ನ ಎಲ್ಲಿಯಾದರೂ ನೋಡಿದರೆ ದಯವಿಟ್ಟು ತಿಳಿಸಿ. ನೀವೇ ಸಾಕಿಕೊಂಡರು ಪರವಾಗಿಲ್ಲ, ನಾನು ಒಂದು ಸಲ ಅಲ್ಲಿಗೆ ಬಂದು ಬೆಕ್ಕನ್ನ ನೋಡಿ ಅದರಲ್ಲಿ ಕ್ಷಮೆ ಕೇಳಿ ಆಹಾರ ನೀಡಿ ಬರುತ್ತೇನೆ. ಯಾರಿಗಾದರೂ ಈ ಬೆಕ್ಕು ಸಿಕ್ಕಿದ್ದು, ಮಾಹಿತಿ ನೀಡಿದರೆ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಮ್ಮ ಮೊಬೈಲ್ ನಂಬರ್ ಹಾಗೂ ಬೆಕ್ಕಿನ ಭಾವಚಿತ್ರ ಸಮೇತ ವಿಜಯಲಕ್ಷ್ಮಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು. ಈಕೆಯ ಪ್ರಾಣಿ ಪ್ರೀತಿ ಗಮನ ಸೆಳೆದಿದೆ.

ಓದಿ:ಶಾಲೆಗಳನ್ನು ಬೇಗ ಆರಂಭಿಸಿ, ವಿವಾದಕ್ಕಾಗಿ ಶಿಕ್ಷಣ ಸ್ಥಗಿತ ಬೇಡ- ಸಿಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.