ಮೈಸೂರು: ಮೊಬೈಲ್ ವಿಚಾರವಾಗಿ ಹಾಡಹಗಲೇ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಗಿರಿಯಲ್ಲಿ ನಡೆದಿದೆ.
ಯಾಸೀನ್ (24) ಮೃತ ದುರ್ದೈವಿ. ಈ ಹಿಂದೆ ಮೊಬೈಲ್ ವಿಚಾರವಾಗಿ ಯಾಸೀನ್ ಹಾಗೂ ಗೆಳೆಯರ ನಡುವೆ ಜಗಳವಾಗಿತ್ತು. ಅದೇ ದ್ವೇಷ ಮುಂದುವರಿಸಿದ್ದ ಗೆಳೆಯರು ಇಂದು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೈ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ನಡೆದ ಭಾವನ ಕೊಲೆ ಹಾಗೂ ಇಂದು ಹಾಡಹಗಲೇ ನಡೆದ ಯಾಸೀನ್ ಕೊಲೆಯಿಂದ ಸಾಂಸ್ಕೃತಿಕ ನಗರದ ಜನರು ಭಯಭೀತರಾಗಿದ್ದು, ಪೊಲೀಸ್ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.