ETV Bharat / state

ಅಣ್ಣ ನಿಂದಿಸಿದ್ದಕ್ಕೆ ತಮ್ಮ ವಿಷ ಕುಡಿದ, ತಮ್ಮನ ಸಾವಿಗೆ ನೊಂದು ಅಣ್ಣನೂ ನೇಣಿಗೆ ಶರಣಾದ! - ಆಸ್ತಿ ವಿಷಯಕ್ಕೆ ಕಲಹದಿಂದ ಸಹೋದರರು ಸಾವು

ಆಸ್ತಿ ವಿಷಯಕ್ಕೆ ಸಹೋದರರ ನಡುವೆ ಕಲಹ ನಡೆದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

brothers-committed-suicide-in-mysuru
ಸಿದ್ದಲಿಂಗಪುರ ಸಹೋದರರ ಸಾವು
author img

By

Published : Jul 3, 2020, 10:58 AM IST

ಮೈಸೂರು: ಆಸ್ತಿ ವಿಷಯಕ್ಕೆ ಅಣ್ಣ ನಿಂದಿಸಿದನಲ್ಲಾ ಎಂದು ಆತನ ತಮ್ಮ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಬಳಿಕ ಅಣ್ಣನೂ ನೊಂದು ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯ ಸಿದ್ದಲಿಂಗಪುರದಲ್ಲಿ ನಡೆದಿದೆ.

ಹೀಗೆ ವಿಷ ಕುಡಿದ ತಮ್ಮ ಗಣೇಶ್ (40), ನೇಣಿಗೆ ಶರಣಾದ ಅಣ್ಣ ಧರಣೇಶ್ (47) ನಗರದ ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರದ ನಿವಾಸಿಗಳಾಗಿದ್ದಾರೆ. ಆಸ್ತಿ ವಿಷಯಕ್ಕೆ ಅಣ್ಣ ತಮ್ಮನನ್ನು ಬೈದಿದ್ದಾನೆ. ಇದರಿಂದ ಬೇಸರಗೊಂಡು ಧರಣೇಶ್, ವರುಣ ಕೆರೆಯ ಪಕ್ಕದ ಜಮೀನಿನಲ್ಲಿ ವಿಷ ಕುಡಿದು ಸಾವನ್ನಪ್ಪಿದ್ದಾನೆ.

ನರಸಿಂಹರಾಜ‌ ಪೋಲಿಸರ ಮಖೇನ ಈ ಸಂಗತಿ ಅಣ್ಣನಿಗೆ ಗೊತ್ತಾಗಿದೆ. ಇದರಿಂದ ಮಾನಸಿಕವಾಗಿ ಜರ್ಜರಿತಗೊಂಡ ಅಣ್ಣ ಧರಣೇಶ್ ಕೂಡ ತನ್ನ ಜಮೀನಿನ ಬಳಿ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮ್ಮನ ಸಾವಿನ ಬಗ್ಗೆ ನರಸಿಂಹರಾಜ ಪೊಲೀಸ್​ ಠಾಣೆ ಹಾಗೂ ಅಣ್ಣನ ಸಾವಿನ ಕುರಿತಂತೆ ಮೇಟಗಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.