ಮೈಸೂರು: ಪುರುಷನ ಕತ್ತಿನ ಭಾಗದಲ್ಲಿ ಸ್ತನವೊಂದು ಬೆಳೆದು, ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರಿ ಗ್ರಾಮದ ವ್ಯಕ್ತಿವೋರ್ವನ ಕತ್ತಿನಲ್ಲಿ ಈ ಸ್ತನ ಬೆಳೆದಿದೆ. ಈ ವ್ಯಕ್ತಿಯನ್ನು ಟಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ವ್ಯಕ್ತಿಗೆ ಚಿಕ್ಕಂದಿನಿಂದಲೇ ಕತ್ತಿನ ಭಾಗದಲ್ಲಿ ಸಣ್ಣದಾದ ಸ್ತನವಿತ್ತಂತೆ. ಆದ್ರೆ ನೋವು ಇರಲಿಲ್ಲವಂತೆ. ಹೀಗಾಗಿ ಸಂಕೋಚದಿಂದ ಇದನ್ನ ವೈದ್ಯರಿಗೆ ತೋರಿಸಿರಲಿಲ್ಲವಂತೆ. ಚಿಕಿತ್ಸೆಯನ್ನೂ ಪಡೆದಿರಲಿಲ್ಲವಂತೆ. ಆದರೆ ಈಗ ಇದು ದೊಡ್ಡದಾದ ಕಾರಣ ಇಂದು ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸಿದ್ದ. ಈ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ ಸ್ತನವನ್ನ ತೆರವುಗೊಳಿಸಲಾಗಿದೆ. ಇದು ಕ್ಯಾನ್ಸರ್ ಗಡ್ಡೆಯಲ್ಲ ಎಂದು ವೈದ್ಯಾಧಿಕಾರಿ ಡಾ. ಗೋವಿಂದಶೆಟ್ಟಿ ತಿಳಿಸಿದರು.