ಮೈಸೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳ ತಾಲೀಮಿಗೆ ರಜೆ ನೀಡಲಾಗಿದೆ. ಮಹಾಲಯ ಅಮಾವಾಸ್ಯೆಯ ದಿನ ಆನೆಗಳಿಗೆ ಅಪಾಯ ಎದುರಾಗಬಹುದು ಎಂಬ ಉದ್ದೇಶದಿಂದ ಅರಮನೆಯಲ್ಲಿ ನಡೆಯುವ ಗಜಪಡೆ ತಾಲೀಮಿಗೆ ವಿರಾಮ ನೀಡಲಾಗಿದೆ.
ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ವಿಕ್ರಂ, ಕಾವೇರಿ, ಚೈತ್ರ, ಲಕ್ಷ್ಮಿ ಆನೆಗಳು ಸದ್ಯ ವಿಶ್ರಾಂತಿ ಪಡೆಯುತ್ತಿವೆ. ನಾಳೆ ಅರಮನೆಯ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗುತ್ತಿದ್ದಂತೆ, ಪೂಜಾ ಮಹೋತ್ಸವದಲ್ಲಿ ಗಜಪಡೆಗಳು ಭಾಗಿಯಾಗಲಿವೆ. 6 ದಿನಗಳ ಕಾಲ ಮಾತ್ರ ಆನೆಗಳಿಗೆ ತಾಲೀಮು ನೀಡಲಾಗಿದೆ.
ಇದನ್ನೂ ಓದಿ: ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 15 ರೂ ಏರಿಕೆ