ಮೈಸೂರು: ಯುವಕನ ಜೊತೆ ಮಹಿಳೆ ಉದ್ದೂರು ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.
ಹುಣಸೂರು ತಾಲೂಕಿನ ಉದ್ದೂರು ಬಳಿಯ ಕೆರೆಯಲ್ಲಿ ಶೀಲಾ (37) ಹಾಗೂ ಕುಮಾರ್ (27) ಆತ್ಮಹತ್ಯೆ ಮಾಡಿಕೊಂಡಿರುವವರು ಎಂದು ಹೇಳಲಾಗುತ್ತಿದೆ. ಕುಮಾರ್ ಶೀಲಾಳ ಪತಿಯ ಅಣ್ಣನ ಮಗನಾಗಿದ್ದು, ಯಾವ ಕಾರಣಕ್ಕಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.
ಕೆರೆ ದಡದಲ್ಲಿ ಕುಮಾರ್ ಹಾಗೂ ಶೀಲಾ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರು ಕೆರೆಗೆ ಹಾರಿರುವ ಅನುಮಾನ ವ್ಯಕ್ತವಾಗಿದೆ. ಬಿಳಿಕೆರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶವ ಪತ್ತೆಯ ಬಳಿಕ ಪ್ರಕರಣದ ಕುರಿತು ಸತ್ಯಾಸತ್ಯತೆ ತಿಳಿಯಲಿದೆ.