ETV Bharat / state

ಪತ್ರಕರ್ತರ ಹೆಸರಿನಲ್ಲಿ ವೈದ್ಯರಿಗೆ ಬ್ಲ್ಯಾಕ್​ಮೇಲ್: ಮೈಸೂರಲ್ಲಿ ಮೂವರು ಯುವತಿಯರ ಬಂಧನ - ಪತ್ರಕರ್ತರ ಹೆಸರಿನಲ್ಲಿ ವೈದ್ಯರಿಗೆ ಬ್ಲ್ಯಾಕ್​ಮೇಲ್

ಪತ್ರಕರ್ತರು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸದಸ್ಯರೆಂದು ಹೇಳಿಕೊಂಡು ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಮೂವರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಅಮ್ರಿನ್ ಸಾನಿಯಾ , ಶಾಹಿದಾ ಹಾಗೂ ಆಮಿಷಾಬಾಯಿ ಬಂಧಿತರು.

Mysore
ಪತ್ರಕರ್ತರ ಹೆಸರಿನಲ್ಲಿ ವೈದ್ಯರಿಗೆ ಬ್ಲಾಕ್ ಮೇಲ್: ಮೂವರು ಯುವತಿಯರ ಬಂಧನ
author img

By

Published : Jan 21, 2021, 1:32 PM IST

ಮೈಸೂರು: ವೈದ್ಯರೊಬ್ಬರಿಗೆ ಪತ್ರಕರ್ತರು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸದಸ್ಯರೆಂದು ಹೇಳಿಕೊಂಡು ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ ಮೂವರು ಯುವತಿಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪತ್ರಕರ್ತರ ಹೆಸರಿನಲ್ಲಿ ವೈದ್ಯರಿಗೆ ಬ್ಲಾಕ್ ಮೇಲ್: ಮೂವರು ಯುವತಿಯರ ಬಂಧನ

ನಗರದ ಕೆ ಆರ್ ಆಸ್ಪತ್ರೆಯ ವೈದ್ಯರೊಬ್ಬರಿಗೆ ಪತ್ರಕರ್ತರು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಸದಸ್ಯರು ಎಂದು ಹೇಳಿಕೊಂಡ ಮೂವರು ಯುವತಿಯರಾದ ಅಮ್ರಿನ್ ಸಾನಿಯಾ , ಶಾಹಿದಾ ಹಾಗೂ ಆಮಿಷಾಬಾಯಿ ಎಂಬುವರು ವೈದ್ಯರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಹಲವಾರು ದೂರುಗಳು ಬಂದಿವೆ. ಈ ಸುದ್ದಿಯನ್ನು ನಮ್ಮ ಚಾನಲ್​ನಲ್ಲಿ ಪ್ರಸಾರ ಮಾಡುತ್ತೇವೆ. ನೀವು 5 ರೂ.ಲಕ್ಷ ಕೊಟ್ಟರೆ ಈ ಸುದ್ದಿಯನ್ನು ಪ್ರಸಾರ ಮಾಡುವುದಿಲ್ಲ ಎಂದು ವೈದ್ಯರಿಗೆ ಬ್ಲ್ಯಾಕ್​ಮೇಲ್ ಮಾಡಲು ಶುರು ಮಾಡಿದ್ದಾರೆ. ಕೊನೆಗೆ 1.75 ಲಕ್ಷ ರೂ. ನೀಡುವಂತೆ ವೈದ್ಯರಿಗೆ ಒತ್ತಾಯಿಸಿದ್ದಾರೆ.

ಇದಕ್ಕೆ ವೈದ್ಯರು ಒಪ್ಪದೇ ಹೋದಾಗ 15 ರಿಂದ 20 ಯುವಕರ ಗುಂಪೊಂದು ವೈದ್ಯರಿಗೆ ಹಣ ನೀಡುವಂತೆ ಹೆದರಿಸಿದ್ದಾರೆ. ಈ ಬಗ್ಗೆ ವೈದ್ಯರು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೂವರು ಯುವತಿಯರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.