ETV Bharat / state

ಮೈಸೂರಿನಲ್ಲಿ ಸಮಸ್ಯೆ ಹೇಳಲು ಬಂದ ಜನರಿಗೆ ಬಿಜೆಪಿ ಶಾಸಕರಿಂದ ಆವಾಜ್ : ವಿಡಿಯೋ

ನೀನು ಎಷ್ಟು ಕೂಗಾಡಿದರು ಅದಕ್ಕೂ ಹೆಚ್ಚಾಗಿ ನಾನು ಕೂಗಾಡ್ತೀನಿ ಎಂದು ಶಾಸಕರು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೀಗೆ ಮಾತಿಗೆ ಮಾತು ಬೆಳೆದಿದ್ದು ನಂತರ ಜನರು ಸಮಾಧಾನಪಡಿಸಿದರು..

ಸಮಸ್ಯೆ ಹೇಳಲು ಬಂದ ಜನರಿಗೆ ಬಿಜೆಪಿ ಶಾಸಕರಿಂದ ಆವಾಜ್

author img

By

Published : Jan 24, 2022, 7:34 PM IST

ಮೈಸೂರು : ಸುಮ್ಮನೇ ನಿಂತ್ಕೊಳಯ್ಯ ನಾನು ಮಾತನಾಡೋದನ್ನ ಕೇಳಿಕೋ, ನೀನ್ ಏನ್ ಮಾತಾಡೋದು ಎಂದು ಸಮಸ್ಯೆ ಹೇಳಲು ಬಂದ ಜನರಿಗೆ ಶಾಸಕರು ಆವಾಜ್ ಹಾಕಿದ ಘಟನೆ ಇಂದು ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ನಡೆದಿದೆ.

ಮೈಸೂರಿನ ಜಿಲ್ಲಾ ಪಂಚಾಯತ್‌ನಲ್ಲಿ ಇಂದು ವಸತಿ ಸಚಿವ ವಿ. ಸೋಮಣ್ಣ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿ, ಹೊರ ಬರುತ್ತಿದಂತೆ ಅಲ್ಲಿಗೆ ಬಂದಿದ್ದ ಏಕಲವ್ಯ ನಗರದ ಜನರು ತಮ್ಮ ಸಮಸ್ಯೆಯನ್ನ ಸಚಿವರ ಬಳಿ ಬಂದು ಹೇಳಿಕೊಳ್ಳುತ್ತಿದ್ದರು.

ಸಮಸ್ಯೆ ಹೇಳಲು ಬಂದ ಜನರಿಗೆ ಬಿಜೆಪಿ ಶಾಸಕರಿಂದ ಆವಾಜ್

ಆಗ ಅಲ್ಲಿಯೇ ಇದ್ದ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಏರು ಧ್ವನಿಯಲ್ಲಿ ಸಮಸ್ಯೆ ಹೇಳುತ್ತಿದ್ದ ಜನರಿಗೆ ಸುಮ್ಮನೇ ನಿತ್ಕೋಳಯ್ಯ ನಾನು ಮಾತಾಡೋದನ್ನ ಕೇಳಿಸಿಕೋ, ಏನು ನೀನು ಮಾತನಾಡೋದು.

ನೀನು ಎಷ್ಟು ಕೂಗಾಡಿದರು ಅದಕ್ಕೂ ಹೆಚ್ಚಾಗಿ ನಾನು ಕೂಗಾಡ್ತೀನಿ ಎಂದು ಶಾಸಕರು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೀಗೆ ಮಾತಿಗೆ ಮಾತು ಬೆಳೆದಿದ್ದು ನಂತರ ಜನರು ಸಮಾಧಾನಪಡಿಸಿದರು. ಮೈಸೂರಿನ ಹೊರವಲಯದ ಏಕಲವ್ಯ ನಗರದ ನಿವಾಸಿಗಳ 475 ಮನೆಗಳನ್ನ ಕೆರೆ ಜಾಗ ಎಂದು ತಡೆ ಹಿಡಿಯಲಾಗಿದೆ.

ಆದರೆ, ಈ ಜಾಗವನ್ನ ಹಿಂದೆ ಕೆರೆ ಜಾಗ ಎಂದು ನೋಡದೆ ಜನರಿಗೆ ಹಂಚಿಕೆ ಮಾಡಲಾಗಿದೆ. ಅಲ್ಲಿ ಕೆಲವು ಕುಟುಂಬಗಳು ವಾಸವಿದ್ದು, ಕೆಲವು ಸೈಟ್‌ಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಆದರೆ, ಈಗ ಈ ಜಾಗ ಕೆರೆ ಎಂದು ತಡೆಹಿಡಿದಿದ್ದು, ಅಲ್ಲಿನ ಜನರಿಗೆ ಸಮಸ್ಯೆಯಾಗಿದೆ.

ಈ ಸಮಸ್ಯೆ ಕೇಳಲು ಬಂದ ಜನರ ಮೇಲೆ ಸ್ಥಳೀಯ ಬಿಜೆಪಿ ಶಾಸಕ ನಾಗೇಂದ್ರ ಅವರು, ತಾನೊಬ್ಬ ಜನಪ್ರತಿನಿಧಿಯೆಂದು ತಿಳಿಯದೆ ದರ್ಪ ತೋರಿದ್ದಾರೆ ಎನ್ನಲಾಗಿದೆ. ‌ಕೊನೆಗೆ ಜನರೇ ಸಮಾಧಾನವಾಗಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.