ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಮಾದಕ ವಸ್ತುಗಳು ಹಾಗೂ ಸೈಬರ್ ಅಪರಾಧಗಳ ಠಾಣೆಗೆ ದೂರು ನೀಡಿದ್ದಾರೆ.
![BJP candidate complaining to cyber station](https://etvbharatimages.akamaized.net/etvbharat/prod-images/kn-mys-01-25-05-2022-complaintnews-7208092_25052022095021_2505f_1653452421_200.jpg)
ಮೈ.ವಿ.ರವಿಶಂಕರ್ ಅಭಿಮಾನಿ ಬಳಗ ಎಂಬ ಹೆಸರಿನಲ್ಲಿ ನನ್ನ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಮತದಾರರಿಗೆ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಳುಹಿಸುವುದಾಗಿ ಅಪಪ್ರಚಾರ ನಡೆಸಲಾಗುತ್ತಿದೆ.
![BJP candidate complaining to cyber station](https://etvbharatimages.akamaized.net/etvbharat/prod-images/kn-mys-01-25-05-2022-complaintnews-7208092_25052022095021_2505f_1653452421_9.jpg)
ರವಿಶಂಕರ್ಗೆ ನಿಮ್ಮ ವೋಟು, ನಿಮ್ಮ ಅಕೌಂಟ್ಗೆ ಪೇಮೆಂಟು... ಎಂಬ ಸಂದೇಶಗಳಿರುವ ಲಿಂಕ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ನನ್ನ ಹೆಸರಿಗೆ ಹಾಗೂ ನಮ್ಮ ಪಕ್ಷಕ್ಕೆ ಕಳಂಕ ತರುವ ಪ್ರಯತ್ನ. ಕೂಡಲೇ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ರವಿಶಂಕರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.