ETV Bharat / state

ಮೈಸೂರು: ಬೈಕ್​-ಬೊಲೆರೋ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು - ಇಬ್ಬರು ಸ್ಥಳದಲ್ಲೇ ಸಾವು

Mysuru accident: ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Bike and Bolero accident in Mysore
ಮೈಸೂರು: ಬೈಕ್​ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
author img

By ETV Bharat Karnataka Team

Published : Nov 10, 2023, 12:46 PM IST

ಮೈಸೂರು: ಬೊಲೆರೋ ಜೀಪ್ ಹಾಗೂ ಬೈಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಕೊತ್ತೆಗಾಲ ಗೇಟ್ ಬಳಿ ನಡೆದಿದೆ. ತಾಲ್ಲೂಕಿನ ಅತ್ತಿಗುಪ್ಪೆ ಗ್ರಾಮದ ಕರಿಯಪ್ಪ (40) ಹಾಗೂ ನಾಗರಾಜು (57) ಮೃತಪಟ್ಟ ಬೈಕ್ ಸವಾರರು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸಂಪೂರ್ಣ ವಿವರ: ಆಂಧ್ರಪ್ರದೇಶ ಮೂಲದ ಬೊಲೆರೋ ವಾಹನವು ಪಿರಿಯಾಪಟ್ಟಣ ಕಡೆಯಿಂದ ಹುಣಸೂರಿಗೆ ಬರುತ್ತಿತ್ತು. ಇತ್ತ ಕೆಲಸ ಮುಗಿಸಿಕೊಂಡು ಕೂಲಿಕಾರ್ಮಿಕರು ಇಬ್ಬರು ಬೈಕ್‌ನಲ್ಲಿ ಅತ್ತಿಗುಪ್ಪೆ ಕಡೆಯಿಂದ ತಮ್ಮ ಊರಿಗೆ ಬರುತ್ತಿದ್ದರು. ಅರಸು ಕಲ್ಲಹಳ್ಳಿ ಗ್ರಾಮದ ಗೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ- ಪಾದಚಾರಿಗೆ ಗುದ್ದಿದ ಅಪರಿಚಿತ ವಾಹನ: ಕೆಲಸದಿಂದ ಮನೆಯತ್ತ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ಬಸ್ ಡಿಕ್ಕಿ ಹೊಡೆದಿದ್ದು, ಹಿಟ್ ಆ್ಯಂಡ್ ರನ್ ಕೇಸ್​ನಲ್ಲಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರಿನ ಆಂಜನೇಯ ದೇವಸ್ಥಾನದ ಬಳಿ ಗುರುವಾರ ರಾತ್ರಿ ನಡೆದಿದೆ. ಚಾಲಕ ಬಸ್‌ಸಮೇತ ಪರಾರಿಯಾಗಿದ್ದಾನೆ.

ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಪಾದಚಾರಿ ಯುವಕ 26 ವರ್ಷದ ಖದೀರ್ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತವ್ಯಕ್ತಿ ಮೂತ್ತೂರಿನ ನಿವಾಸಿಯಾಗಿದ್ದು, ಮೂಟೆ ಹೊರುವ ಕೆಲಸ ಮಾಡುತ್ತಿದ್ದ. ರಾತ್ರಿ 8 ಗಂಟೆ ಸಮಯದಲ್ಲಿ ಕೆಲಸ ಮುಗಿದ ನಂತರ, ರೈಲ್ವೆ ಸ್ಟೇಷನ್​ನಿಂದ ಊಟ ಪಾರ್ಸೆಲ್ ತೆಗೆದುಕೊಂಡು ಬರುವಾಗ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕದೀರ್ ಪಾಷನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಮುತ್ತೂರು ಬಳಿ ಅಪಘಾತಗಳು ಸಾಮಾನ್ಯವಾಗಿವೆ ಎಂಬುದು ಸ್ಥಳೀಯರ ಆರೋಪ. ಕಿರಿದಾದ ರಸ್ತೆ, ರಸ್ತೆ ಬದಿಯಲ್ಲಿ ಬೀದಿ ದೀಪಗಳು ಅಳವಡಿಸದೇ ಇರುವುದು ಮತ್ತು ಹಂಪ್ಸ್​ ಅಳವಡಿಸದೇ ಇರುವುದು ಅಪಘಾತಗಳಿಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಬೀದಿದೀಪಗಳನ್ನು ಅಳವಡಿಸಿ ಅಮಾಯಕರ ಪ್ರಾಣ ರಕ್ಷಣೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ನಿಂತಿದ್ದ ಕ್ರೂಸರ್‌ ಕಾರಿಗೆ ಲಾರಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.