ETV Bharat / state

ವರುಣಾ ಕ್ಷೇತ್ರದಲ್ಲಿ ಗೌಡ ಲಿಂಗಾಯತರಿಗೆ ಟಿಕೆಟ್ ನೀಡಿ: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ - Basava Jayamritunjaya Swamiji insist to ticket for lingayath community

ಮಹದೇಶ್ವರ ಬೆಟ್ಟದಿಂದ ಆರಂಭವಾದ ಈ ರ್ಯಾಲಿಯೂ ಮೈಸೂರು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಯಶಸ್ವಿಯಾಗಿದೆ. ಈ ಭಾಗದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಈಗ ರ್ಯಾಲಿ ನಾಲ್ಕು ದಿನ ಪೂರ್ಣಗೊಳಿಸಿದೆ. ಇಂದಿನಿಂದ ಮಂಡ್ಯದಲ್ಲಿಯೂ ಅಭಿಯಾನ ಆರಂಭಿಸಲಾಗುವುದು. ಉತ್ತರ ಕರ್ನಾಟಕದಿಂದ ಬೆಂಗಳೂರಿನವರೆಗೆ 712 ಕಿ.ಮೀ. ರ್ಯಾಲಿ ನಡೆಸಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸದನದಲ್ಲಿ 2ಎ ಮಾನ್ಯತೆ ನೀಡುವುದಾಗಿ ಒಪ್ಪಿಕೊಂಡಿದೆ. ಆದರೂ ನಮ್ಮ ಅಭಿಯಾನವನ್ನು ಈ ಭಾಗದಲ್ಲಿಯೂ ವಿಸ್ತರಿಸಿದ್ದೇವೆ..

basava-jayamritunjaya-swamiji
ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Aug 30, 2021, 11:03 PM IST

ಮೈಸೂರು : ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಗೌಡ ಸಮಾಜ ಅಧಿಕ ಸಂಖ್ಯೆಯಲ್ಲಿದೆ. ಜನಸಂಖ್ಯಾನುಗುಣವಾಗಿ ಈ ಸಮುದಾಯಕ್ಕೆ 2023ರ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅವರು ಎಲ್ಲಿಯಾದರೂ ನಿಲ್ಲಲಿ. ಆದರೆ, ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಗೌಡ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ

2023ರ ಚುನಾವಣೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ನಮ್ಮ ಮುಖಂಡರನ್ನು ಅಧಿಕಾರ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎರಡು ರಾಜಕೀಯ ಪಕ್ಷಗಳು ಆ ಕೆಲಸಕ್ಕೆ ಮುಂದಾಗಬೇಕು. ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ 6 ಸಾಮಾನ್ಯ ಕ್ಷೇತ್ರವಿದೆ. ಇಲ್ಲಿ ಲಿಂಗಾಯತಗೌಡ, ಪಂಚಮಸಾಲಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಸೂಕ್ತ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಲಭ್ಯವಾಗಿಲ್ಲ.‌ ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಲಭ್ಯವಾಗಿಲ್ಲ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯವು ಹಿನ್ನಡೆ ಅನುಭವಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಲಭ್ಯವಾಗಿದೆ.

ಆದರೆ, ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ಕಡೆಗಣಿಸಲ್ಪಟ್ಟಿದ್ದು, ಸಮುದಾಯವನ್ನು ಸಂಘಟಿಸಬೇಕಿದೆ. ಈ ಹಿನ್ನೆಲೆ ಮೀಸಲಾತಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಸಮುದಾಯ ಸಂಘಟನೆಗಾಗಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಅಭಿಯಾನ ವಿಸ್ತರಿಸಿದ್ದೇವೆ : ಮಹದೇಶ್ವರ ಬೆಟ್ಟದಿಂದ ಆರಂಭವಾದ ಈ ರ್ಯಾಲಿಯೂ ಮೈಸೂರು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಯಶಸ್ವಿಯಾಗಿದೆ. ಈ ಭಾಗದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಈಗ ರ್ಯಾಲಿ ನಾಲ್ಕು ದಿನ ಪೂರ್ಣಗೊಳಿಸಿದೆ.

ಇಂದಿನಿಂದ ಮಂಡ್ಯದಲ್ಲಿಯೂ ಅಭಿಯಾನ ಆರಂಭಿಸಲಾಗುವುದು. ಉತ್ತರ ಕರ್ನಾಟಕದಿಂದ ಬೆಂಗಳೂರಿನವರೆಗೆ 712 ಕಿ.ಮೀ. ರ್ಯಾಲಿ ನಡೆಸಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸದನದಲ್ಲಿ 2ಎ ಮಾನ್ಯತೆ ನೀಡುವುದಾಗಿ ಒಪ್ಪಿಕೊಂಡಿದೆ. ಆದರೂ ನಮ್ಮ ಅಭಿಯಾನವನ್ನು ಈ ಭಾಗದಲ್ಲಿಯೂ ವಿಸ್ತರಿಸಿದ್ದೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಧರಣಿ ಆರಂಭಿಸುತ್ತೇವೆ : ಸೆ.13ರೊಳಗೆ ಮೀಸಲಾತಿ ಕೊಡುತ್ತೇವೆ ಎಂದು ಸರ್ಕಾರ ಒಪ್ಪಿದೆ. ಅದನ್ನು ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂಬ ಕಾರಣಕ್ಕೆ ಅಭಿಯಾನ ಆರಂಭಿಸಿದ್ದೇವೆ. ಕೊಟ್ಟಮಾತು ನಡೆಸಿಕೊಡದಿದ್ದರೆ ಧರಣಿ ಆರಂಭಿಸುತ್ತೇವೆ ಎಂದರು.

ಮೀಸಲಾತಿಯ ಅಗತ್ಯವಿದೆ : ಲಿಂಗಾಯತರಿಗೆ ಮೀಸಲಾತಿ ಬೇಕಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿರಬಹುದು. ಏಕೆಂದರೆ ಅವರು ಸಂಪನ್ನ ಭರಿತರಿದ್ದಾರೆ. ನಮ್ಮ ಸಮುದಾಯದ ಕಷ್ಟ ಅವರಿಗೆ ಗೊತ್ತಿಲ್ಲ. ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಮೀಸಲಾತಿಯ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಓದಿ: 'ರೈತರ ಜೊತೆ ಒಂದು ದಿನ' ಕಾರ್ಯಕ್ರಮ ಮುಂದುವರೆಯಲಿದೆ : ಸಚಿವ ಬಿ ಸಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.