ETV Bharat / state

ಮೈಸೂರು: ನಾಳೆಯಿಂದ ಬಹುರೂಪಿ ರಂಗೋತ್ಸವ, ರಂಗಾಯಣದಲ್ಲಿ ಭರದ ಸಿದ್ಧತೆ - ಮೈಸೂರಿನಲ್ಲಿ ನಾಳೆಯಿಂದ ಬಹುರೂಪಿ ರಂಗೋತ್ಸವ ಆರಂಭ

ಬಹುರೂಪಿಗೆ ಶೇ.90ರಷ್ಟು ಸಿದ್ಧತೆಗಳು ಮುಗಿದಿದ್ದು, ಇಡೀ ರಂಗಾಯಣ ಒಂದು ತಂಡವಾಗಿ ಕೆಲಸ ಮಾಡುತ್ತಿದೆ.‌ ಈ ಬಾರಿ ಬಹುರೂಪಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ರಂಗಾಯಣದಲ್ಲಿ ಭರದ ಸಿದ್ದತೆ
ರಂಗಾಯಣದಲ್ಲಿ ಭರದ ಸಿದ್ದತೆ
author img

By

Published : Mar 10, 2022, 7:12 PM IST

ಮೈಸೂರು: ರಂಗಾಯಣದಲ್ಲಿ ಪ್ರತಿ ವರ್ಷ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಈ ಬಾರಿ ತಾಯಿ ವಸ್ತು ವಿಷಯವನ್ನು ಇಟ್ಟುಕೊಂಡು ನಡೆಯಲಿದ್ದು ಸಿದ್ಧತೆ ಭರದಿಂದ ಸಾಗಿದೆ.

ರಂಗೋತ್ಸವಕ್ಕೆ ನಡೆದಿರುವ ಸಿದ್ಧತಾ ಕಾರ್ಯಗಳ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಈಟಿವಿ ಭಾರತದ ಜೊತೆ ಮಾತನಾಡಿ, 'ಈ ಬಾರಿಯ ವಸ್ತುವಿಷಯ 'ತಾಯಿ' ಆಗಿದ್ದು ಭಾವ ಬಣ್ಣಗಳ ಬಹುರೂಪಿಯನ್ನು ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ. 10 ಜನ ಶಿಲ್ಪ ಕಲಾವಿದರು ಕಲ್ಲಿನ ಶಿಲ್ಪಗಳನ್ನು ಕೆತ್ತುವ ಕೆಲಸ ಮಾಡುತ್ತಿದ್ದಾರೆ. ಬಹುರೂಪಿಯ ನೆನಪಿಗಾಗಿ ಈ ಬಾರಿ ಶಿಲ್ಪ ರಂಗವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.

ನಾವು ಇಡೀ ಪ್ರಕೃತಿಯನ್ನು ತಾಯಿಯ ರೂಪದಲ್ಲಿ ನೋಡುತ್ತೇವೆ. ಪ್ರಸ್ತುತ ಪ್ರಕ್ಷುಬ್ಧ ಸ್ಥಿತಿ ಇದ್ದು, ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಬೆಲೆಗಳು ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಜನರಲ್ಲಿ ನೆಮ್ಮದಿಯಿಲ್ಲ. ಈ ನಿಟ್ಟಿನಲ್ಲಿ ತಾಯಿ ಪರಿಕಲ್ಪನೆ ತಣಿವು ನೀಡಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.