ETV Bharat / state

ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನನ್ನು ನೋಡಿ ದಾಖಲೆ ಬರೆದ ಸಾಹಸಿ - ಬದರಿ ನಾರಾಯಣ್‌ ದಾಖಲೆ

ಪ್ರಾಣಾಯಾಮ ಮಾಡುತ್ತಾ ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನ ವೀಕ್ಷಣೆ -ಮೈಸೂರಿನ ವ್ಯಕ್ತಿಯ ವಿಶಿಷ್ಟ ಸಾಧನೆ - ಬದರಿ ನಾರಾಯಣ್‌ ರಿಂದ ವಿಶ್ವ ದಾಖಲೆ

Badari Narayan
ಬರಿಗಣ್ಣಿನಲ್ಲಿ ಸೂರ್ಯನನ್ನು ನೋಡಿ ದಾಖಲೆ ಬರೆದ ಸಾಹಸಿ ಬದರಿ ನಾರಾಯಣ್
author img

By

Published : Jan 25, 2023, 4:35 PM IST

ಸಾಹಸಿ ಬದರಿ ನಾರಾಯಣ್..

ಮೈಸೂರು: ನಗರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಸಾಹಸಿಯೊಬ್ಬರು ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು. ಇವರ ಹೆಸರು ಬದರಿ ನಾರಾಯಣ್. ಇವರಿಗೆ ಅಪಾಯಕಾರಿ ಸಾಹಸ ಮಾಡುವುದು ಎಂದರೆ ಎಲ್ಲಿಲ್ಲದ ಉತ್ಸಾಹ. ಅಂತಹ ಸಾಹಸವನ್ನು ಮಾಡುವ ಮೂಲಕ ಎಲ್ಲರನ್ನ ಅಚ್ಚರಿ ಗೊಳಿಸಿದ್ದಾರೆ. ಈ ಮೂಲಕ ವಿಶ್ವ ದಾಖಲೆ ಮಾಡಲು ಹೊರಟ್ಟಿದ್ದಾರೆ. ಈಗಾಗಲೇ ಯೋಗದ ಮೂಲಕ ಹಲವಾರು ದಾಖಲೆಗಳನ್ನು ಮಾಡಿದ್ದು, ಈಗ ಈ ರೀತಿಯ ಸಾಹಸ ಮಾಡಿ ವಿಶ್ವ ದಾಖಲೆ ಮಾಡಲು ಹೊರಟಿದ್ದಾರೆ.

ಸಾಹಸಕ್ಕೆ ತಾಯಿ ಪ್ರೇರಣೆ: ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಬದರಿ ನಾರಾಯಣ್, "ಈ ಸಾಹಸಕ್ಕೆ ಪ್ರೇರಣೆ ನಮ್ಮ ತಾಯಿ. ರಥ ಸಪ್ತಮಿ ದಿನ ನಮ್ಮ ತಾಯಿಯ ಹುಟ್ಟುಹಬ್ಬ. ಅವರಿಗೆ ಈ ಸಾಹಸವನ್ನ ಅರ್ಪಣೆ ಮಾಡುತ್ತೇನೆ. ಈ ವರ್ಷ ಅವರ ಆರೋಗ್ಯ ಚೆನ್ನಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನನ್ನ ಗುರುಗಳ ಮಾರ್ಗದರ್ಶನದಲ್ಲಿ ಈ ಸಾಹಸವನ್ನ ಮಾಡುತ್ತಿದ್ದೇನೆ" ಎಂದರು.

Badari Narayan
ಬರಿಗಣ್ಣಿನಲ್ಲಿ ಸೂರ್ಯನನ್ನು ನೋಡಿ ದಾಖಲೆ ಬರೆದ ಸಾಹಸಿ ಬದರಿ ನಾರಾಯಣ್

ಪುರಾತನ ಸ್ಥಳಗಳಲ್ಲಿ ಯೋಗ: ಬದರಿ ನಾರಾಯಣ್ ಇಲ್ಲಿಯವರೆಗೆ ಸುಮಾರು 1,300 ಪುರಾತನ ಸ್ಥಳಗಳಲ್ಲಿ, ಶಿರಶಾಸನ ಯೋಗಗಳನ್ನ ಪ್ರದರ್ಶನ ಮಾಡಿದ್ದಾರೆ. ಇದರ ಜತೆಗೆ ಕಾಂಬೋಡಿಯ, ಮಲೇಷಿಯಾ ಹಾಗೂ ಭಾರತದ ಹಲವಾರು ಪುರಾತನ ಸ್ಥಳಗಳು ಸೇರಿವೆ. ಇವರ ಸಾಹಸಕ್ಕೆ ಹಲವಾರು ಸಂಸ್ಥೆಗಳು ಲಿಂಕ್ ಅವಾರ್ಡ್, ಆಶಿಷ್ಟ್ ವರ್ಲ್ಡ್ ರೆಕಾರ್ಡ್, ಎಲೈಟ್ ವರ್ಲ್ಡ್ ರೆಕಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಇದನ್ನೂ ಓದಿ: ಎವರೆಸ್ಟ್​ ಶಿಖರವೇರಿದ ಟೆನ್ಸಿಂಗ್ ನಾರ್ಗೆ ಪ್ರಶಸ್ತಿ ವಿಜೇತೆ ನೈನಾಸಿಂಗ್ ಸಾಹಸ ಗಾಥೆ

ಅಪಾಯದ ಸಾಹಸ: ಬರಿಗಣ್ಣಿನಿಂದ ಸೂರ್ಯನನ್ನು ನೋಡಿ ಪ್ರಾಣಾಯಾಮ ಮಾಡುವುದು ಬಹಳ ಅಪಾಯಕಾರಿ. ಆದರೂ ತುಂಬಾ ಉಪಯೋಗವಿದೆ. ಈ ಪ್ರಕ್ರಿಯೆಗೆ 'ಸೂರ್ಯ ಕಿರಣ ಕ್ರಿಯೆ' ಎಂದು ಹೇಳುತ್ತೇವೆ. ಈ ರೀತಿಯ ಕ್ರಿಯೆಯಿಂದ ನಮ್ಮ ಮೆದುಳಿನ ಹಿಂಭಾಗ ಸಕ್ರಿಯಗೊಳ್ಳುತ್ತದೆ. ಜತೆಗೆ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಬಹಳ ಉಪಯುಕ್ತ ಹಾಗೂ ನಮ್ಮ ದೇಹಕ್ಕೆ ಈ ಕ್ರಿಯೆಯಿಂದ ವಿಟಮಿನ್ ಡಿ ಪೂರೈಕೆ ಆಗುತ್ತದೆ ಎನ್ನುತ್ತಾರೆ ಬದರಿ ನಾರಾಯಣ್.

ವಿಶ್ವ ದಾಖಲೆ ಪ್ರಯತ್ನ: ಸೂರ್ಯೋದಯ ಅರ್ಧ ಗಂಟೆ ಹಾಗೂ ಸೂರ್ಯ ಮುಳುಗುವ ಅರ್ಧ ಗಂಟೆ ಮೊದಲು ಸೂರ್ಯನನ್ನ ಬರಿಗಣ್ಣಿನಲ್ಲಿ ನೋಡಬಹುದು. ಆದರೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಇಂತಹ ಪ್ರಯತ್ನಕ್ಕೆ ಯಾರು ಕೈ ಹಾಕಬಾರದು ಎಂದು ಬದರಿ ನಾರಾಯಣ್ ಜನರಲ್ಲಿ ಅವರು ವಿನಂತಿಸಿದರು. ಮಧ್ಯಾಹ್ನ 12 ಗಂಟೆಯಿಂದ 12:42 ರವರೆಗೆ ಬರಿಗಣ್ಣಿನಿಂದ ತ್ರಾಟಕ ಪ್ರಾಣಾಯಾಮ ಮಾಡುವ ಮೂಲಕ ವಿಶ್ವ ದಾಖಲೆ ಪ್ರಯತ್ನ ಮಾಡಿದ್ದು, ಇದನ್ನು ದಾಖಲೆಗಾಗಿ ಕಳುಹಿಸುತ್ತೇವೆ ಎಂದು "ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ: ಕೃತಕ ಕಾಲಿನ ಸಹಾಯದಿಂದ ಶಿಖರ ಏರಿದ ಸಾಹಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.